×
Ad

ಕಾಸರಗೋಡು: ‘ಅಮ್ಮ ತೊಟ್ಟಿಲಿ’ಗೆ 10 ದಿನದ ಹಸುಳೆ

Update: 2016-11-27 00:07 IST

ಕಾಸರಗೋಡು, ನ.26: ಕಾಸರಗೋಡು ‘ಅಮ್ಮ ತೊಟ್ಟಿಲಿ’ಗೆ ಇನ್ನೊಂದು ಮಗು ಸೇರ್ಪಡೆಗೊಂಡಿದೆ. ಕೇವಲ ಹತ್ತು ದಿನಗಳ ಹಸುಳೆಯನ್ನು ತನ್ನ ತಾಯಿ ತೊರೆದು ಹೋಗಿದ್ದು, ಹಸುಳೆಯು ಕಾಸರಗೋಡು ಜನರಲ್ ಆಸ್ಪತ್ರೆಯ ದಾದಿಯರ ಆರೈಕೆಯಲ್ಲಿದೆ.
 

ಸುಮಾರು 2.7 ಕಿಲೋ ತೂಕ ಹೊಂದಿದೆ. ಶುಕ್ರವಾರ ರಾತ್ರಿ ನವಜಾತ ಹೆಣ್ಣು ಶಿಶುವನ್ನು ಅಮ್ಮ ತೊಟ್ಟಿಲಲ್ಲಿ ತೊರೆದು ಹೋಗಿದ್ದು, ಅಲರಾಂ ಶಬ್ದ ಕೇಳಿ ಆಸ್ಪತ್ರೆ ದಾದಿಯರು ತೆರಳಿ ನೋಡಿದಾಗ ಮಗು ಕಂಡು ಬಂದಿದ್ದು, ಬಳಿಕ ಆಸ್ಪತ್ರೆಗೆ ಕೊಂಡೊಯ್ದು ತಪಾಸಣೆ ನಡೆಸಲಾಯಿತು.


 ಮಗು ಆರೋಗ್ಯದಿಂದಿದ್ದು, ಆಸ್ಪತ್ರೆಯ ಶಿಶು ಕಲ್ಯಾಣ ಘಟಕದ ಪರಿಪಾಲನೆಯಲ್ಲಿದೆ. ಎರಡು ತಿಂಗಳ ಕಾಲ ಮಗು ಶಿಶು ಸಂರಕ್ಷಣಾ ಘಟಕದಲ್ಲಿರಿಸಲಾಗುವುದು, ಈ ಅವಧಿಯಲ್ಲಿ ವಾರಿಸುದಾರರು ಬರದಿದ್ದಲ್ಲಿ ದತ್ತು ಪಡೆಯುವವರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಗುವನ್ನು ತೊರೆದು ಹೋದವರಿಗಾಗಿ ಕಾಸರಗೋಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

ಅನೈತಿಕ ಚಟುವಟಿಕೆ, ಅಕ್ರಮ ಸಂಬಂಧ, ಅವಿವಾಹಿತೆಗೆ ಜನಿಸುವ ಶಿಶುಗಳನ್ನು ರಸ್ತೆ ಬದಿ, ಬಸ್ ನಿಲ್ದಾಣ, ಪೊದೆ ಹಾಗೂ ಇತರ ಸ್ಥಳಗಳಲ್ಲಿ ತೊರೆದುಹೋಗುತ್ತಿರುವ ಘಟನೆಗಳು ಹೆಚ್ಚುತ್ತಿರುವುದರಿಂದ ವರ್ಷಗಳ ಹಿಂದೆ ರಾಜ್ಯ ಶಿಶು ಕಲ್ಯಾಣ ಇಲಾಖೆ ಅಮ್ಮ ತೊಟ್ಟಿಲು ಎಂಬ ಕೇಂದ್ರವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಪರಿಸರದಲ್ಲಿ ಆರಂಭಿಸಿದೆ.
   ಈಗಾಗಲೇ ಐದು ನವಜಾತ ಶಿಶುಗಳು ಈ ಅಮ್ಮತೊಟ್ಟಿಲಿನಲ್ಲಿ ಲಭಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News