ಹೊಸ ಚಿಂತನೆಗಳಿಗೆ ಗ್ರಾಮೀಣ ಮಕ್ಕಳ ಕೊಡುಗೆ ಅನನ್ಯ : ಪ್ರೊ.ಡಾ.ಗೋಪಿನಾಥ್ ನಾಯಕ್

Update: 2016-11-27 11:52 GMT

ಬೆಳ್ಮಣ್, ನ.27: ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಉಳಿದುಕೊಂಡ ಕೌಟುಂಬಿಕ ವೌಲ್ಯಗಳು ಹಲವಾರು ಮಹಾತ್ಮರನ್ನು, ವಿಜ್ಞಾನಿಗಳನ್ನು ರೂಪಿ ಸಿವೆ. ಹೊಸ ಅನ್ವೇಷಣೆ ಚಿಂತನೆಗಳಿಗೆ ಗ್ರಾಮೀಣ ಮಕ್ಕಳ ಕೊಡುಗೆ ಅನನ್ಯ ಎಂದು ಮಣಿಪಾಲ ಎಂಐಟಿ ಸಿವಿಲ್ ವಿಭಾಗದ ಪ್ರೊ.ಡಾ.ಗೋಪಿನಾಥ್ ನಾಯಕ್ ಹೇಳಿದ್ದಾರೆ.

ಪಳ್ಳಿ ಅಡಪಾಡಿ ಸಮೀಪದ ದಾದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಳೆವಿದ್ಯಾರ್ಥಿ ಸಂಘದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡುತಿದ್ದರು.

ಸಮಾರಂಭವನ್ನು ಮೂಡುಬೆಳ್ಳೆ ಸಂತ ಲಾರೆನ್ಸ್ ಶಿಕ್ಷಣ ಸಂಸ್ಥೆಗಳ ಸಂಚಾ ಲಕ ರೆ.ಪಾ.ಕ್ಲೆಮೆಂಟ್ ಮಸ್ಕರೇನ್ಹಸ್ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಬಿ.ಪುಂಡಲೀಕ ಮರಾಠೆ ದಿಕ್ಸೂಚಿ ಭಾಷಣ ಮಾಡಿದರು. ಪಳ್ಳಿ ಗ್ರಾಪಂ ಅಧ್ಯಕ್ಷೆ ಸಂಗೀತಾ ನಾಯಕ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಭರತ್ ರಂಜನ್, ಆನಂದ ಭಟ್, ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಕ್ಲಾರಾ ಸೆರಾವೊ, ಎರ್ಲಪಾಡಿ ಶಾಲಾ ಶಿಕ್ಷಕ ದೇವೇಂದ್ರ ನಾಯಕ್ ಮುಖ್ಯ ಅತಿಥಿಗಳಾಗಿದ್ದರು.

ಹರೀಶ್ ನಾಯಕ್ ದಾದಬೆಟ್ಟು ಸ್ವಾಗತಿಸಿದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಟ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಶಿಧರ್ ವರದಿ ವಾಚಿಸಿದರು. ಸಂತೋಷ್ ನಾಯಕ್ ವಂದಿಸಿದರು. ನರೇಂದ್ರ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News