ವಿದ್ಯಾರ್ಥಿಗಳಿಂದ ಪೊಲೀಸ್ ಠಾಣೆ ಭೇಟಿ

Update: 2016-11-27 11:54 GMT

ಗಂಗೊಳ್ಳಿ, ನ.27: ಗಂಗೊಳ್ಳಿ ಸರಕಾರಿ ಉರ್ದು ಶಾಲೆಯ ವಿದ್ಯಾರ್ಥಿ ಗಳು ಶನಿವಾರ ಗಂಗೊಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಹಲವು ಮಾಹಿತಿ ಗಳನ್ನು ಪಡೆದುಕೊಂಡರು.

ಹೆಡ್‌ಕಾನ್‌ಸ್ಟೇಬಲ್ ಮೋಹನ್ ಪೂಜಾರಿ ಹಾಗೂ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಜ್ಯೋತಿ ಬಂದೂಕು, ಕೋಳ, ಕಸ್ಟಡಿ ಕುರಿತು ಮಾಹಿತಿ ನೀಡಿದರು. ಮಕ್ಕಳು ಬಂದೂಕು, ಕೋಳ ಉಪಯೋಗಿಸುವ ಕುರಿತು ಮಕ್ಕಳು ಪೊಲೀಸರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.

ಈ ಸಂದರ್ಭದಲ್ಲಿ ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ, ಕಾನ್‌ಸ್ಟೇಬಲ್ ಗಳಾದ ಚಂದ್ರಕಾಂತ್, ಗುರುರಾಜ್, ಶಾಲಾ ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಆ್ಯಂಬುಲೆನ್ಸ್‌ನ ಇಬ್ರಾಹಿಂ ಗಂಗೊಳ್ಳಿ ಮಕ್ಕಳಿಗೆ ವಾಹನದ ವ್ಯವಸ್ಥೆ ಕಲ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News