×
Ad

‘ಸಂಕ್ರಮಣ’ ಭೋವಿ ಸಮಾಜದ ಜಿಲ್ಲಾ ಸಮಾವೇಶ

Update: 2016-11-27 18:09 IST

ಉಡುಪಿ, ನ.27: ಭೋವಿ ಸಮಾಜ ಶಿಕ್ಷಣ, ಆರ್ಥಿಕ, ರಾಜಕೀಯ ರಂಗ ದಲ್ಲಿ ಹಿಂದುಳಿದಿರಲು ಸಮಾಜ ಬಾಂಧವರಲ್ಲಿ ತಾಳ್ಮೆ, ಸಹನೆ ಇಲ್ಲದಿರು ವುದೇ ಕಾರಣ. ಸರಕಾರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ನಾವು ಮೊದಲು ಸಂಘಟನಾತ್ಮಕವಾಗಿ ಕಾರ್ಯಪ್ರವೃತ್ತರಾಗಬೇಕೆಂದು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀಮನ್ ನಿರಂಜನ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ಭೋವಿ(ವಡ್ಡರ್) ಕ್ಷೇಮಾಭಿವೃದ್ದಿ ಸಂಘ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ವತಿಯಿಂದ ಉಡುಪಿ ಕುಂಜಿಬೆಟ್ಟು ಶಾರದ ಕಲ್ಯಾಣ ಮಂಟಪದಲ್ಲಿ ರವಿವಾರ ಆಯೋಜಿಸಲಾದ ‘ಸಂಕ್ರಮಣ’ ಜಿಲ್ಲಾ ಸಮಾ ವೇಶ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರು ಒಸಿಸಿಐ ಅಧ್ಯಕ್ಷ ರವಿ ಮಾಕಳಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಗಳಲ್ಲಿ 30 ರಿಂದ 40 ಸಾವಿರ ಭೋವಿ ಸಮಾಜದವರಿದ್ದಾರೆ. ಆದರೆ ಇವರಿಗೆ ಈವರೆಗೆ ದೃಢೀಕೃತ ದಾಖಲೆ ಪತ್ರ ಸರಕಾರದಿಂದ ಸಿಕ್ಕಿಲ್ಲ. ಈ ಸಮಸ್ಯೆಯನ್ನು ರಾಜ್ಯದ ಎಲ್ಲ ಕಡೆಗಳಲ್ಲಿರುವ ಸಮಾಜ ಬಾಂಧವರು ಅನುಭವಿಸುತ್ತಿದ್ದಾರೆ. ಹಾಗಾಗಿ ಸರಕಾರ ಭೋವಿ ಸಮಾಜವನ್ನು ಸರಿಯಾಗಿ ಗುರುತಿಸಿ ಸೌಲಭ್ಯಗಳನ್ನು ನೀಡ ಬೇಕು ಎಂದು ತಿಳಿಸಿದರು. ಶ್ರಮಜೀವಿಗಳಾದ ಭೋವಿ ಸಮುದಾಯವು ಸರಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಸಮುದಾಯದ ಪ್ರತಿಯೊಬ್ಬರು ಸಂಘಟಿತ ಮನೋಭಾವ ದಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕಾಗಿದೆ. ಸರಕಾರ ಎಲ್ಲರಿಗೂ ನೀಡುವ ಸೌಲಭ್ಯಗಳನ್ನು ಭೋವಿ ಸಮುದಾಯಕ್ಕೂ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಅಧ್ಯಕ್ಷತೆಯನ್ನು ಸಂಘ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಈಶ್ವರ ಸಾಲಿಗ್ರಾಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಘದ ಗೌರವಧ್ಯಕ್ಷ ಜಿ. ಬಾಲರಾಜ್ ಮಂಗಳೂರು, ಉಪಾಧ್ಯಕ್ಷ ಷಣ್ಮುಗಂ ಮಂಗಳೂರು, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ರಘುಪತಿ ಭಟ್, ಗೋಪಾಲ ಭಂಡಾರಿ, ಭೋವಿ ಸಮಾಜದ ಮುಖಂಡರಾದ ಕೆ.ಕೆ.ನಟ ರಾಜ್ ಕೊಯಮುತ್ತೂರು, ದೇವರಾಜ್ ಕೊಯ ಮುತ್ತೂರು ಮೊದಲಾದ ವರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಪರ್ಕಳ ಸ್ವಾಗತಿಸಿದರು. ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News