×
Ad

ಸಾರ್ವಜನಿಕರಿಂದ ಹಲ್ಲೆಗೀಡಾದ ಈ ವ್ಯಕ್ತಿ ಯಾರು?

Update: 2016-11-27 19:36 IST

ಹೊಸದಿಲ್ಲಿ, ನ.27: ಜನಪ್ರತಿನಿಧಿಯಂತೆ ಕಾಣುವ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರು ತೀವ್ರ ಥಳಿಸುವ ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ನಾನಲ್ಲ ಎಂದು ಕೇಂದ್ರ ಸಚಿವ ಹರ್ಷವರ್ಧನ್ ಅವರು ಸ್ಪಟ್ಟೀಕರಣ ನೀಡಿದ್ದಾರೆ.

ನನ್ನ ಹೆಸರಲ್ಲಿ ವೀಡಿಯೊವೊಂದು ವಾಟ್ಸ್‌ಆಪ್ ಹಾಗೂ ಇತರ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ದಾರಿತಪ್ಪಿಸುವ ಹಾಗೂ ಚಾರಿತ್ರ ಹರಣ ಮಾಡುವ ದುಷ್ಕೃತ್ಯದ ಭಾಗವಾಗಿದೆ ಎಂದು ಡಾ. ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.

ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿಯವರು ವೀಡಿಯೊವೊಂದನ್ನು ಟ್ವೀಟ್ ಮಾಡಿ, ಈ ವೀಡಿಯೊದಲ್ಲಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ತುತ್ತಾಗಿರುವ ವ್ಯಕ್ತಿ ಯಾರು? ಈತ ಕೇಂದ್ರ ಸಚಿವ ಆಗಿರುವ ಸಾಧ್ಯತೆ ಇದೆಯೇ? ಎಂದು ಕೇಳಿದ ಮೇಲೆ ಈ ವೀಡಿಯೊ ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಹಲವರು ಇದು ಹಳೆಯ ವೀಡಿಯೋ ಆಗಿದ್ದು, ಇದರಲ್ಲಿರುವ ವ್ಯಕ್ತಿ ಪಶ್ಚಿಮಬಂಗಾಳದ ಅಸಾನ್ಸೋಲ್‌ನ ಬಿಜೆಪಿ ಶಾಸಕ ಎಂದು ಹೇಳಿದ್ದರು.

ಕೇಂದ್ರ ಸರಕಾರದ ನೋಟು ರದ್ಧತಿ ನಿರ್ಧಾರವನ್ನು ವಿರೋಧಿಸುವವರು ಈ ವೀಡಿಯೊವನ್ನು ಬಳಸಿಕೊಂಡು ಇದು ಬಿಜೆಪಿ ನಾಯಕರ ವಿರುದ್ದ ಸಾರ್ವಜನಿಕರ ಆಕ್ರೋಶಕ್ಕೆ ಸಾಕ್ಷಿ ಎಂದು ಹೇಳುತ್ತಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News