×
Ad

ಸ್ವೀಡನ್: ಮಸೀದಿಯಲ್ಲಿ ದುಷ್ಕರ್ಮಿಗಳಿಂದ ದಾಂಧಲೆ

Update: 2016-11-27 19:40 IST

 ಸ್ಟಾಕ್‌ಹೋಮ್(ಸ್ವೀಡನ್), ನ.27: ಸ್ವೀಡನ್‌ನಲ್ಲಿ ಕೋಮುದ್ವೇಷದ ಹೊಸ ಪ್ರಕರಣವೊಂದರಲ್ಲಿ, ರಾಜಧಾನಿ ಸ್ಟಾಕ್‌ಹೋಮ್‌ನ ಮಸೀದಿಯೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು ಶನಿವಾರ ಬೆಳಗ್ಗೆ ಮಸೀದಿಯೊಳಗೆ ನುಗ್ಗಿ, ಗೋಡೆಗಳಲ್ಲಿ ವಿದ್ವೇಷಕಾರಿ ಬರಹಗಳನ್ನು ಹಾಗೂ ನಾಝಿ ಸ್ವಸ್ತಿಕಾ ಚಿಹ್ನೆಗಳನ್ನು ಪೇಂಟ್ ಮಾಡಿದ್ದಲ್ಲದೆ, ಸಿಡಿಮದ್ದುಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ.

ಮಸೀದಿಗೆ ಮುಂಜಾನೆ ನಮಾಝ್ ಸಲ್ಲಿಸಲು ಆಗಮಿಸಿದ್ದವರು ತೆರಳಿದ ಬಳಿಕ ವೇಳೆ ದಾಳಿಕೋರರು ಮಸೀದಿ ಕಟ್ಟಡದೊಳಗೆ ನುಗ್ಗಿದ್ದರೆಂದು ಅಧಿಕೃತ ಮೂಲಗಳು ತಿಳಿಸಿವೆ. ಘಟನೆ ನಡೆದ ವೇಳೆ ಮಸೀದಿಯೊಳಗೆ ಓರ್ವ ಮಾತ್ರ ಇದ್ದು, ಆತನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸ್ವೀಡನ್‌ನ ಮಸೀದಿಗಳು ಹಾಗೂ ನಿರಾಶ್ರಿತ ಶಿಬಿರಗಳ ಮೇಲೆ ಜನಾಂಗೀಯ ದ್ವೇಷದ ಸರಣಿ ದಾಳಿಗಳು ವರದಿಯಾಗಿವೆ. 2014 ಹಾಗೂ 2015ರಲ್ಲಿ ಸಿರಿಯ, ಅಫ್ಘಾನ್ ಮತ್ತಿತರ ದೇಶಗಳಿಂದ ಸ್ವೀಡನ್ 2.45 ಲಕ್ಷಕ್ಕೂ ಅಧಿಕ ನಿರಾಶ್ರಿರಿಗೆ ಆಶ್ರಯ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News