ಬೈಕಂಪಾಡಿ: ನಲ್ಮ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ಮಂಗಳೂರು, ನ.27: ವಿವಿಧ ಅಭಿವೃದ್ಧಿ ಕೆಲಸಗಳೊಂದಿಗೆ ನಗರದ ನಾಗರಿಕರ ಸಾಮಾಜಿಕ ಹಾಗೂ ಶೈಕ್ಷಣಿಕ ಏಳಿಗೆಗೂ ಮಹಾನಗರಪಾಲಿಕೆಯಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಉಪಮೇಯರ್, ಕಾರ್ಪೋರೇಟರ್ ಪುರುಷೋತ್ತಮ ಚಿತ್ರಾಪುರ ಹೇಳಿದರು.
ಬೈಕಂಪಾಡಿಯ ಅಂಗರಗುಂಡಿಯಲ್ಲಿ ಮಂಗಳೂರು ಮನಪಾ ಆಶ್ರಯದಲ್ಲಿ ಕೆಪಿಟಿ ಪಾಲಿಟೆಕ್ನಿಕ್ ಸಿಸಿಟೆಕ್ ವತಿಯಿಂದ 2015-16ನೆ ಸಾಲಿನ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ನಲ್ಮ್) ಯೋಜನೆಯಲ್ಲಿ ನಡೆದ ಗಾರ್ಮೆಂಟ್ ಹಾಗೂ ಸೀವಿಂಗ್ ಮೆಷಿನ್ ಅಪರೇಟರ್ ಯೋಜನೆಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಮನಪಾ ಸಮುದಾಯ ಅಭಿವೃದ್ಧಿ ಅಧಿಕಾರಿ ಮಾಲಿನಿ ರಾಡ್ರಿಗಸ್ ಮಾತನಾಡಿ, ನಲ್ಮ್ ಯೋಜನೆಯಲ್ಲಿ ಅಂಗರಗುಂಡಿಯಲ್ಲಿ ಸ್ಥಳೀಯ ಮಿಸ್ಬಾಹುಲ್ ಉಲೂಂ ಮದ್ರಸ ಕಟ್ಟಡದಲ್ಲಿ ಸುಮಾರು 50 ಮಹಿಳೆಯರಿಗೆ ಸಾಂಪ್ರದಾಯಿಕ ರೀತಿಯೊಂದಿಗೆ ಆಧುನಿಕ ವಿನ್ಯಾಸದ 6 ತಿಂಗಳ ಟೈಲರಿಂಗ್ ತರಬೇತಿ ನೀಡಲಾಗಿದೆ. ಆಸಕ್ತರಿಗೆ ಬ್ಯಾಂಕ್‌ಗಳ ಸಹಾಯದೊಂದಿಗೆ ಹಣಕಾಸು ನೆರವು ನೀಡಲಾಗುವುದು ಎಂದು ಹೇಳಿದರು.
ಬೈಕಂಪಾಡಿ ಜುಮಾ ಮಸೀದಿಯ ಅಧ್ಯಕ್ಷ ಅಬ್ದುನ್ನಾಸೀರ್ ಲಕ್ಕಿಸ್ಟಾರ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಟಿ ಪ್ರಾಂಶುಪಾಲ ಬಾಬು ದೇವಾಡಿಗ, ಮಸೀದಿಯ ಉಪಾಧ್ಯಕ್ಷ ಚೈಬಾವಾ, ನಗರಪಾಲಿಕೆಯ ಸಮುದಾಯ ವಿಭಾಗದ ಗೀತಾ, ಸುಲತಾ, ಸ್ಥಳೀಯರಾದ ಹಸನಬ್ಬ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸೈದುದ್ದೀನ್ ಸ್ವಾಗತಿಸಿದರು. ತರಬೇತಿಯ ಸ್ಥಳೀಯ ಸಮನ್ವಯಕಾರ ಇಲ್ಯಾಸ್ ವಂದಿಸಿದರು.