ಕೋಟೇಶ್ವರ: ಇಮಾಂ ಬೂಸೂರೀ ತಝ್ಕಿಯ ಗಾರ್ಡನ್ ವತಿಯಿಂದ ಬುರ್ದಾ ಕಾನ್ಫರೆನ್ಸ್

Update: 2016-11-27 16:27 GMT

ಕುಂದಾಪುರ, ನ.27: ಪ್ರವಾದಿ (ಸ. ಅ)ಯವರ ಬೋಧನೆಗಳು ಶಾಂತಿ ಹಾಗೂ ಸೌಹಾರ್ದತೆಯ ಸಂದೇಶಗಳಾಗಿದ್ದು, ಅದು ಜಾಗತಿಕ ಸಮಸ್ಯೆಗಳಿಗೆ ಪರಿಹಾರವೂ ಆಗಿದೆ ಎಂದು ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಹೇಳಿದರು.

ಅವರು ಇಮಾಂ ಬೂಸೂರೀ ತಝ್ಕಿಯ ಗಾರ್ಡನ್ನ ಆಶ್ರಯದಲ್ಲಿ ನಡೆದ ಹುಬ್ಬುರ್ರಸೂಲ್ ಬುರ್ದಾ ಕಾನ್ಫರೆನ್ಸ್‌ನ್ನು ಉದ್ಘಾಟಿಸಿ ಮಾತನಾಡಿದರು.

ಸಯ್ಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಅಧ್ಯಕ್ಷತೆ ವಹಿಸಿದ್ದರು. ಮರ್ಕಝ್ ಯುನಿವರ್ಸಿಟಿ ಉಪಕುಲಪತಿ ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಮುಖ್ಯ ಭಾಷಣಗೈದರು. ಸಯ್ಯದ್ ಝೈನುದ್ದೀನ್ ತಂಙಳ್ ಕೂರಿಕುಝಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ಫಹದ್ ಫರ್ತವಿ ಕಣ್ಣೂರು ಹಾಗೂ ಜುನೈದ್ ಮಂಜೇರಿ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಿತು.

ಸಯ್ಯದ್ ಶಹೀದುದ್ದೀನ್ ತಂಙಳ್ ಶಿವಮೊಗ್ಗ, ಸಯ್ಯದ್ ಅಲವಿ ತಂಙಳ್ ಕರ್ಕಿ, ಸಯ್ಯುದ್ ಅಮೀಮ್ ತಂಙಳ್ ಮೂಡಿಗೆರೆ, ಸಲೀಂ ಮದನಿ ಕುತ್ತಾರ್, ರಫೀಕ್ ಸಅದಿ ದೇಲಂಪಾಡಿ, ಹಂಝ ಮದನಿ ಮಿತ್ತೂರು, ಮುಸ್ತಫಾ ಸಅದಿ ಶಿರ್ವ, ಇಕ್ರಮುಲ್ಲಾ ಸಖಾಫಿ ನಾವುಂದ, ಅಶ್ರಫ್ ಸಖಾಫಿ ಕಣ್ಣಂಗಾರ್, ಇಸ್ಮಾಯೀಲ್ ಮದನಿ ಮಾವಿನಕಟ್ಟೆ, ತೌಫೀಕ್ ಹಾಜಿ ನಾವುಂದ, ಮೊಹಿಯುದ್ದೀನ್ ಹಾಜಿ ಗುಡ್‌ವಿಲ್, ಹಂಝತ್ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು.

ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News