ಪೇರಡ್ಕ ಸೈಂಟ್ ಮೇರಿಸ್ ಸೂನೋರೋ ಚರ್ಚಿನಲ್ಲಿ ರಕ್ತದಾನ ಶಿಬಿರ

Update: 2016-11-27 16:31 GMT

ಕಡಬ, ನ.27: ಸೌತ್ ಕೆನರಾ ಮೇಘಲಾ ಯೂತ್ ಅಸೋಸಿಯೇಷನ್‌ನ ಆಶ್ರಯದಲ್ಲಿ ರೆಂಜಿಲಾಡಿ ಇ.ಎ.ಇ. ಸೈಂಟ್ ಮೇರೀಸ್ ಸೂನೋರೋ ಚರ್ಚ್‌ನಲ್ಲಿ ಪುತ್ತೂರು ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಇವರಿಂದ ನ, 27 ರಂದು ರಕ್ತದಾನ ಶಿಬಿರವು ರೆಂಜಿಲಾಡಿ ಎಂ.ಸಿ.ಸಿ. ಯುವ ಸಂಘದ ವತಿಯಿಂದ ನಡೆಯಿತು.

ಕಡಬ ಚಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ರವರು ದೀಪ ಪ್ರಜ್ವಲನಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ರಕ್ತದಾನ ಶ್ರೇಷ್ಠದಾನ ಇದರಿಂದ ಅದೆಷ್ಟೋ ಪ್ರಾಣ ಉಳಿಸಲು ಸಾದ್ಯವಾಗಬಹುದು. ಹೆಚ್ಚಿನವರು ಇಂತಹ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತನ್ನ ಅಳಿಲ ಸೇವೆಯನ್ನು ಸಮಾಜಕ್ಕೆ ಅರ್ಪಿಸಬೇಕೆಂದರು. ರೆಂಜಿಲಾಡಿ ಸೈಂಟ್ ಮೇರೀಸ್ ಸೂನೋರೋ ಚರ್ಚ್‌ನ ಧರ್ಮಗುರುಗಳಾದ ರೆ ಪಾ ಕ್ಲಿಂಟೊ ಮ್ಯಾಥ್ಯು ಸಬೆಯ ಅಧ್ಯಕ್ಷತೆ ವಹಿಸಿ ಶು ಹಾರೈಸಿದರು.

ಪುತ್ತೂರು ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಸಂಯೋಜಕ ಡಾ ರಾಮಚಂದ್ರ ಟ್ ಮಾಹಿತಿ ನೀಡಿ, 18 ವರ್ಷದಿಂದ 60 ವರ್ಷದ ಒಳಗಿನವರು ರಕ್ತದಾನ ಮಾಡಬಹುದು, 45 ಕೆ.ಜಿ.ಗಿಂತ ಹೆಚ್ಚಿನ ತೂಕ ಉಳ್ಳವರು, ರಕ್ತದಾನ ಮಾಡುವುದಲ್ಲದೆ ಆರೋಗ್ಯವಂತರು ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು.

ಈ ಸಂದರ್ದಲ್ಲಿ ಟೆಕ್ನೀಶಿಯನ್ ಗಳಾದ ಸಜಿನಿ ಮಾರ್ಟಿಸ್, ಶಾಲಿನಿ ಬಿ.ಶೆಟ್ಟಿ, ಕು ಪ್ರಮಿಳಾ ರಕ್ತದಾನದಲ್ಲಿ ಸಹಕರಿಸಿದರು. ಝಿರ್ ಕೋಸಿಲ್ ಇಂಡಿಯಾ ಲಿಮಿಟೆಡ್ ಮೇನೇಜಿಂಗ್ ಡೈರೆಕ್ಟರ್ ಅನಿಲ್ ಈಶೋ ಶುಹಾರೈಸಿದರು.

ಚರ್ಚ್‌ನ ಟ್ರಸ್ಟಿ ಸಜಿ ಪೇರಡ್ಕ, ಚರ್ಚ್‌ನ ಆಡಳಿತ ಮಂಡಳಿ ಕಾರ್ಯದರ್ಶಿ ಬಿಜು ಮ್ಯಾಥ್ಯು ಉಪಸ್ಥಿತರಿದ್ದರು. ಸೌತ್ ಕೆನರಾ ಮೇಘಲಾ ಸೆಕ್ರೆಟರಿ ಜೈಮನ್ ಸ್ವಾಗತಿಸಿ, ಸಜಿ ವಂದಿಸಿದರು. ಬಳಿಕ ಪ್ರಥಮವಾಗಿ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ರಕ್ತದಾನ ಮಾಡುವ ಮೂಲಕ ಹಲವಾರು ಮಂದಿ ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News