ಮೂಡುಬಿದಿರೆ: ಸ್ನೇಹ ಸಂದೇಶಯಾತ್ರೆಯ ಪೂರ್ವಸಿದ್ಧತಾ ಸಭೆ

Update: 2016-11-27 17:42 GMT

ಮೂಡುಬಿದಿರೆ, ನ.27: ಮೌಲಾನಾ ಪೇರೋಡ್ ಉಸ್ತಾದ್‌ರ ನೇತೃತ್ವದಲ್ಲಿ 2017ರ ಫೆ. 3ರಿಂದ 5ರವರೆಗೆ ಕುಟ್ಯಾಡಿ ಸಿರಾಜುಲ್ ಹುದಾ ಸಂಸ್ಥೆಯ ಬೆಳ್ಳಿಹಬ್ಬ ನಡೆಯಲಿದ್ದು, ಇದರ ಪ್ರಚಾರಾರ್ಥ 2017ರ ಜನವರಿ 2ರಿಂದ 4ರವರೆಗೆ ನಡೆಯಲಿರುವ ಸ್ನೇಹ ಸಂದೇಶ ಯಾತ್ರೆಯ ಸಿದ್ಧತೆಗಳ ಕುರಿತು ಸಮಾಲೋಚನಾ ಸಭೆಯು ಮೂಡುಬಿದಿರೆಯಲ್ಲಿ ನಡೆಯಿತು.

ಎಂ.ಪಿ. ಅಶ್ರಫ್ ಸಅದಿ ಮಲ್ಲೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಚ್. ಐ. ಅಬೂ ಸುಫಿಯಾನ್ ಮದನಿ ಮತ್ತು ಅಬ್ದುರ್ರಶೀದ್ ಝೈನಿ ಖಾಮಿಲ್ ಸಖಾಫಿ ವಿಷಯ ಮಂಡಿಸಿದರು.

ಬಳಿಕ ಸಂದೇಶ ಯಾತ್ರೆಯ ಸ್ವಾಗತ ಸಮಿತಿಯನ್ನು ರಚಿಸಿಲಾಯಿತು. ಗೌರವಾಧ್ಯಕ್ಷರಾಗಿ ಎ.ಐ. ಅಬೂಸುಫ್ಯಾನ್ ಮದನಿ, ಅಧ್ಯಕ್ಷರಾಗಿ ಸಲಾಂ ಮದನಿ ಗುಂಡುಕಲ್ಲು, ಕಾರ್ಯದರ್ಶಿಯಾಗಿ ಹನೀಫ್ ನೀರಳಿಕೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪಿ.ಎಚ್. ಉಸ್ಮಾನ್ ಕೆರೆವಳಿ, ಫರೀದ್ ಮಾರೂರು, ಹುಸೈನ್ ಹಂಡೇಲ್, ಜೊತೆಕಾರ್ಯದರ್ಶಿಗಳಾಗಿ ಮುತ್ತಲಿಬ್, ರಿಝ್ವಾನ್ ಗುಂಡುಕಲ್ಲು, ಹೈದರ್ ಹಂಡೇಲು ಮತ್ತು ಖಜಾಂಜಿಯಾಗಿ ಆದರ್ಶ್ ಹನೀಫ್ ಪುಚ್ಚಮೊಗರುರನ್ನು ಆರಿಸಲಾಯಿತು.

 ಸ್ವಾಗತ ಸಮಿತಿಯ ಕನ್ವೀನರ್‌ಗಳಾಗಿ ಜಬ್ಬಾರ್ ಪುತ್ತಿಗೆ ಹಂಡೇಲು, ಹೈದರ್, ಸರ್ಫರಾಝ್ ಗುಂಡುಕಲ್ಲು, ರಿಝ್ವಿನ್ ಹಂಡೇಲು, ಇಬ್ರಾಹೀಂ ಕೆರೆಬಳಿ, ಸಲಾಂ ಗಂಟಾಲ್ಕಟ್ಟೆ, ನೂರುದ್ದೀನ್, ಮಾರೂರು ಪುತ್ತಾಕರನ್ನು ನೇಮಿಸಲಾಯಿತು.

ವೇದಿಕೆಯಲ್ಲಿ ಮುಹಮ್ಮದಲಿ ಸಖಾಫಿ ಅಶ್ಅರಿಯ್ಯ, ಸಲಾಂ ಮದನಿ ಮೂಡುಬಿದಿರೆ, ಇಬ್ರಾಹೀಂ ಸಅದಿ, ಅಬ್ದುಲ್ ಅಝೀಝ್ ಸಖಾಫಿ, ಕೆ.ಎಚ್. ಇಸ್ಮಾಯೀಲ್ ಸಅದಿ ಕಿನ್ಯ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News