ಮಲ್ಯರ ಜೆಟ್ ವಿಮಾನ ಹರಾಜಿಗೆ ಸೇವಾ ತೆರಿಗೆ ಇಲಾಖೆ ನಿರ್ಧಾರ
Update: 2016-11-27 23:37 IST
ಮುಂಬೈ, ನ.27: ದೇಶ ಬಿಟ್ಟು ಲಂಡನ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ ಮಲ್ಯರಿಂದ ಬರಬೇಕಿರುವ 535 ಕೋಟಿ ರೂ. ಬಾಕಿ ಮೊತ್ತವನ್ನು ವಸೂಲಿ ಮಾಡುವ ಉದ್ದೇಶದಿಂದ ಮಲ್ಯರ ಖಾಸಗಿ ಜೆಟ್ ವಿಮಾನವನ್ನು ನವೆಂಬರ್ 28-29ರಂದು ಹರಾಜು ಹಾಕಲು ಸೇವಾ ತೆರಿಗೆ ಇಲಾಖೆ ನಿರ್ಧರಿಸಿದೆ.