ಲಿಂಗಪ್ಪಯ್ಯಕಾಡು ರಸ್ತೆ ಕಾಮಗಾರಿಗೆ ಚಾಲನೆ
ಮುಲ್ಕಿ, ನ.27: ಕಳೆದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮುಲ್ಕಿ ಲಿಂಗಪ್ಪಯ್ಯಕಾಡು ರೈಲು ನಿಲ್ದಾಣ ಸಂಪರ್ಕ ರಸ್ತೆ ಕಾಮಗಾರಿಗೆ ಶಾಸಕ ಅಭಯಚಂದ್ರ ಜೈನ್ ರವಿವಾರ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಶಾಸಕರ ನಿಧಿಯಿಂದ 10 ಲಕ್ಷ ರೂ. ಮತ್ತು ಟಾಸ್ಕ್‌ಪೋರ್ಸ್ ಅನುದಾನ 3 ಲಕ್ಷ ರೂ. ವೆಚ್ಚದಲ್ಲಿ ಲಿಂಗಪ್ಪಯ್ಯಕಾಡುವಿನಿಂದ ರೈಲು ನಿಲ್ದಾಣ ಹಾಗೂ ರಾಜ್ಯ ಹೆದ್ದಾರಿಯ ಕಿಲ್ಪಾಡಿ ವರೆಗಿನ ನೇತಾಜಿ ಸುಭಾಶ್ಚಂದ್ರ ಭೋಸ್ ರಸ್ತೆಯ ಸುಮಾರು 350 ಮೀಟರ್ ರಸ್ತೆಯನ್ನು ಒಟ್ಟು 13 ಲಕ್ಷರೂ. ವೆಚ್ಚದಲ್ಲಿ ಪೇವರ್ ಫಿನಿಶ್ ಹಾಗೂ ಮೋರಿ ನಿರ್ಮಾಣ ಕಾಮಗಾರಿ ನಡೆಸಲಾಗುವುದು ಎಂದರು.
ಮುಲ್ಕಿಯ ಸರ್ವಾಂಗೀಣ ಅಭಿವೃದ್ಧಿಗೆ ಈ ಬಾರಿ ಎಸ್‌ಎಫ್‌ಸಿ ಯೋಜನೆಯಿಂದ 5 ಕೋಟಿ ರೂ. ಗೂ ಅಧಿಕ ಅನುದಾನ ದೊರೆಯಲಿದೆ. ಕೆ.ಎಸ್.ರಾವ್ ನಗರದ ಸರಕಾರಿ ಶಾಲೆ 25 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಸರಕಾರದಿಂದ ಸೂಕ್ತ ಅನುದಾನ ಒದಗಿಸಿಕೊಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಈ ಸಂದರ್ಭ ತಾಪಂ ಸದಸ್ಯ ಶರತ್ ಕುಬೆವೂರು, ಕಿಲ್ಪಾಡಿ ಗ್ರಾಪಂ ಅಧ್ಯಕ್ಷ ಶ್ರೀಕಾಂತ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾರ್ಡ್, ಯುವ ಕಾಗ್ರೆಸ್ ಅಧ್ಯಕ್ಷ ಹಕೀಂ, ಕಾಂಗ್ರೆಸ್ ಮುಖಂಡರಾದ ಬಿ.ಎಂ.ಆಸಿಫ್, ಯೋಗೀಶ್ ಕೋಟ್ಯಾನ್, ಪುತ್ತುಬಾವ, ಸಂದೀಪ್ ಚಿತ್ರಾಪು, ಶೈಲೇಶ್, ಬಶೀರ್ ಕುಳಾಯಿ, ಕರುಣಾಕರ ಶೆಟ್ಟಿ, ಅಬೂಬಕರ್, ಡಾ.ಹರಿಪ್ರಸಾದ್ ಶೆಟ್ಟಿ, ರಾಘವ ಸುವರ್ಣ, ಜನಾರ್ದನ ಬಂಗೇರ, ಅಹ್ಮದ್ ಬಾವ, ಅಶೋಕ್ ಪೂಜಾರಿ, ಮಹಾಬಲ ಸನಿಲ್, ನವೀನ್ ಪುತ್ರನ್, ಬಶೀರ್ ಅಹ್ಮದ್, ಲೋಕೇಶ್ ಕೋಟ್ಯಾನ್, ಅಬ್ದುಲ್ ಖಾದರ್, ಗುತ್ತಿಗೆದಾರ ಸಂತೋಷ್ ಶೆಟ್ಟಿ, ಜಿಪಂ ಇಂಜಿನಿಯರ್ ಪ್ರಶಾಂತ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು