ಕಡಬ: ಜೀಪು ಬೈಕ್ ಢಿಕ್ಕಿ- ಸವಾರನಿಗೆ ಗಾಯ
Update: 2016-11-28 11:37 IST
ಕಡಬ, ನ.28: ಕಡಬದಿಂದ ನೆಲ್ಯಾಡಿ ಕಡೆಗೆ ಹೋಗುತ್ತಿದ್ದ ಬೈಕ್ ಗೆ ಜೀಪೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಜಖಂಗೊಂಡಿರುವ ಘಟನೆ ಕಡಬ ಪೆಟ್ರೋಲ್ ಪಂಪ್ ಬಳಿ ಇಂದು ನಡೆದಿದೆ.
ಕೀರ್ತಿ ಮೋಟರ್ಸ್ ನ ನೌಕರ ಕಿರಣ್ ನ ಬೈಕ್ ಗೆ ಜೀಪೊಂದು ಅಡ್ಡವಾಗಿ ಬಂದು ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.