ಮರ್ಧಾಳದಲ್ಲೊಂದು ವಿಶಿಷ್ಟ ಬ್ಯಾನರ್
Update: 2016-11-28 12:01 IST
ಕಡಬ, ನ.28. ನವೆಂಬರ್ 28ರಂದು ಕೆಲವು ರಾಜಕೀಯ ಪಕ್ಷಗಳು ಭಾರತ್ ಬಂದ್ ಮಾಡಬೇಕೆಂದು ಕರೆ ಕೊಟ್ಟಿದ್ದ ಹಿನ್ನೆಲೆಯಲ್ಲಿ ಮರ್ಧಾ ಬಸ್ಸು ನಿಲ್ದಾಣದಲ್ಲಿ ವಿಶಿಷ್ಟ ರೀತಿಯ ಬ್ಯಾನರೊಂದು ಕಂಡು ಬಂದಿದ್ದು ಜನರನ್ನು ಆಕರ್ಷಿಸುತ್ತಿದೆ.
ಬ್ಯಾನರ್ ನಲ್ಲಿ ನವೆಂಬರ್ 28ರ ಭಾರತ್ ಬಂದ್ ಗೆ ನಮ್ಮ ಬೆಂಬಲವಿಲ್ಲ. ಏಕೆಂದರೆ, ನಮ್ಮೂರಿನಲ್ಲಿ ಭ್ರಷ್ಟರೂ ಇಲ್ಲ, ನಮ್ಮಲ್ಲಿ ಕಪ್ಪು ಹಣವೂ ಇಲ್ಲ. ನಮ್ಮ ತಾತ್ಕಾಲಿಕ ವೈಯಕ್ತಿಕ ಸಮಸ್ಯೆಗಳನ್ನು ಮೀರಿ ಭಯೋತ್ಪಾದನೆ, ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಕೇಂದ್ರ ಸರಕಾರದ ಹೋರಾಟದಲ್ಲಿ ನಾವೂ ಕೈಜೋಡಿಸುತ್ತೇವೆ. ನವ ಭಾರತದ ನಿರ್ಮಾಣಕ್ಕಾಗಿ ಒಂದು ಹೆಜ್ಜೆ ಪ್ರಧಾನಿಯೊಂದಿಗೆ, ನಾಗರೀಕರು ಬಂಟ್ರ - ಮರ್ಧಾಳ ಎಂಬ ವಾಕ್ಯವನ್ನು ಬಿತ್ತರಿಸಲಾಗಿದೆ.