×
Ad

ಬಿಜೆಪಿ ಹಾಗೂ ಅದರ ಮಿತ್ರ ಸಂಘಟನೆಗಳು ಲಡ್ಡು ಹಂಚಿ ಸಂಭ್ರಮಾಚರಿಸಿದರು!

Update: 2016-11-28 13:40 IST

ಮಂಗಳೂರು, ನ.28: ಕೇಂದ್ರ ಸರಕಾರವು 500 ರೂ. ಮತ್ತು 1000 ರೂ.ಗಳ ಹಳೆ ನೋಟುಗಳನ್ನು ರದ್ಧು ಪಡಿಸಿರುವುದರಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವಿಪಕ್ಷಗಳು ನಗರದ ವಿವಿಧ ಕಡೆ ಆಕ್ರೋಶ ದಿನವನ್ನಾಚರಿಸಿದರೆ, ಬಿಜೆಪಿ ಹಾಗೂ ಅದರ ಮಿತ್ರ ಸಂಘಟನೆಗಳು ಲಡ್ಡು ಹಂಚಿ ಸಂಭ್ರಮಾಚರಿಸಿದವು.

ಹಿಂದೂ ಜಾಗರಣಾ ವೇದಿಕೆ ವತಿಯಿಂದ ಕಾರ್ಯಕರ್ತರು ನಗರದ ಪಂಪ್ವೆಲ್ ಸರ್ಕಲ್ ಬಳಿ ಬಸ್ಸು, ಕಾರು ಸೇರಿದಂತೆ ವಾಹನಗಳಲ್ಲಿ ಸಂಚರಿಸುತ್ತಿದ್ದವರಿಗೆ ಲಡ್ಡು ಹಂಚಿ ಸಂಭ್ರಮಾಚರಿಸಿದರು.

ಇದೇ ವೇಳೆ ಯುವ ಬ್ರಿಗೇಡ್  ಕಾರ್ಯಕರ್ತರು ನಗರದ ಅಂಚೆ ಕಚೇರಿ, ಬ್ಯಾಂಕ್ ಕಚೇರಿಗಳಿಗೆ ಭೇಟಿ ನೀಡಿ ಸಿಹಿ ಹಂಚಿ ಸಂಭ್ರಮಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News