ಕಾಸರಗೋಡು: ಹೊಳೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತ್ಯು
Update: 2016-11-28 15:36 IST
ಕಾಸರಗೋಡು, ನ.28: ಹೊಳೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಬಾವಿಕ್ಕೆರೆಯಲ್ಲಿ ನಡೆದಿದೆ.
ಬಾವಿಕ್ಕರೆಯ ಹಾಶಿ೦ (12) ಮತ್ತು ಅಬ್ದುಲ್ ಅಜೀಜ್ (17) ಮೃತಪಟ್ಟವರು.
ಬಾವಿಕ್ಕೆರೆಯ ಪಯಸ್ವಿನಿ ಹೊಳೆಗೆ ಸ್ನಾನಕ್ಕಿಳಿದ ವೇಳೆ ನೀರಿನಲ್ಲಿ ಮುಳಿಗಿದ್ದಾರೆ. ತಕ್ಷಣ ಸ್ಥಳೀಯರು ಮಕ್ಕಳನ್ನು ಮೇಲೆತ್ತಿ ಹತ್ತಿರದ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಅಡೂರು ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.