ಪಿಣರಾಯಿಯನ್ನು, ಸರ್ವಾಧಿಕಾರಿ ಕಿಂ ಜಾಂಗ್ ರಂತೆ ತೋರಿಸಿದ ಕಾಂಗ್ರೆಸ್ ಶಾಸಕ

Update: 2016-11-28 11:12 GMT

 ತೃಶೂರ್, ನವೆಂಬರ್ 28: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಉತ್ತರಕೊರೊಯದ ಅಧ್ಯಕ್ಷ ಕಿಂ ಜಾಂಗ್ ಉನ್ ಆಗಿ ತಿರುಚಿದ ಫೋಟೊವನ್ನು ಕಾಂಗ್ರೆಸ್ ಶಾಸಕ ವಿ.ಟಿ. ಬಲರಾಂ ತನ್ನ ಫೇಸ್ ಬುಕ್‌ನಲ್ಲಿ ಫೋಸ್ಟ್ ಮಾಡಿದ್ದಾರೆಂದು ವರದಿಯಾಗಿದೆ.

 ನಿಲಂಬೂರಿನ ಮಾವೊವಾದಿಗಳನ್ನು ನಕಲಿ ಎನ್‌ಕೌಂಟರ್ ಮೂಲಕ ಹತ್ಯೆಗೈಯ್ಯಲಾಗಿದೆ ಎಂದು ಸಂಶಯ ಬಲವಾಗಿದ್ದು. ಈ ಹಿನ್ನೆಲೆಯಲ್ಲಿ ಪಿಣರಾಯಿ ವಿಜಯನ್‌ರನ್ನು ಸರ್ವಾಧಿಕಾರಿಗೆ ಹೋಲಿಸಿ ಬಲರಾಂ ಇಂತಹ ಪೋಸ್ಟ್ ಮಾಡಿದ್ದಾರೆ.

ಯಾಕೆ ಎನ್‌ಕೌಂಟರ್‌ಮೂಲಕಹತ್ಯೆ ಮಾಡಲಾಗುತ್ತಿದೆ ಎಂದು ಬಲರಾಂ ಪ್ರಶ್ನಿಸಿದ್ದಾರೆ. ಪೋಸ್ಟ್ ಕೆಳಭಾಗದಲ್ಲಿ ಬಲರಾಂರನ್ನು ಬೆಂಬಲಿಸಿ ವಿರೋಧಿಸಿ ಅನೇಕ ಕಮೆಂಟ್‌ಗಳು ಫೇಸ್‌ಬುಕ್‌ನಲ್ಲಿ ಪ್ರತ್ಯಕ್ಷಗೊಂಡಿವೆ. ಬಲ ರಾಂರ ಫೋಟೊ ಮೋರ್ಫ್‌ಮಾಡಿದ ಪೋಸ್ಟ್‌ಗಳು ಕೂಡಾ ಇವೆಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News