ನ.30ರಂದು ಕೆ.ಸಿ.ರೋಡ್‌ನಲ್ಲಿ ಹುಬ್ಬುರ್ರಸೂಲ್ ಕಾರ್ಯಕ್ರಮ
ಮಂಗಳೂರು, ನ. 28: ಸುನ್ನೀ ಕೋಆರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ವತಿಯಿಂದ ನ.30ರಂದು ಸಂಜೆ 4 ಗಂಟೆಗೆ ಕೆ.ಸಿ.ರೋಡ್ ಜಂಕ್ಷನ್‌ನ ತಾಜುಲ್ ಉಲಮಾ ವೇದಿಕೆಯಲ್ಲಿ ‘ಹುಬ್ಬುರ್ರಸೂಲ್ ಪ್ರಭಾಷಣ-2016’ ಕಾರ್ಯಕ್ರಮ ನಡೆಯಲಿದೆ.
ಖಾಝಿ ಶೈಖುನಾ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್‌ಬೇಕಲ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಎಸ್‌ವೈಎಸ್ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಾದುಷಾ ಸಖಾಫಿ ಆಲಪ್ಪುಝ ಮುಖ್ಯ ಭಾಷಣ ಮಾಡಲಿದ್ದು, ಸೈಯದ್ ಶಿಹಾಬುದ್ದೀನ್ ಅಲ್ ಮಶ್ಹೂರು ತಲಕ್ಕಿ ಕೂಟು ಪ್ರಾರ್ಥನೆ ನೆರವೇರಿಸಲಿದ್ದಾರೆ.
ಸಯ್ಯದ್ ಸಿ.ಟಿ.ಎಂ. ಸಲೀಂ ತಂಙಳ್ ಕೆ.ಸಿ.ರೋಡ್, ಎಂಎಸ್‌ಎಂ ಅಬ್ದುರ್ರಶೀದ್ ಝೈನಿ, ಸ್ವಾಗತ ಸಮಿತಿಯ ಅಧ್ಯಕ್ಷ ಯು.ಬಿ.ಮುಹಮ್ಮದ್ ಹಾಜಿ, ಸಂಚಾಲಕ ಅಬ್ದುಲ್ಲ ಮದನಿ ಕೊಮರಂಗಳ, ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಮಂಜನಾಡಿ, ಸಚಿವ ಯು.ಟಿ.ಖಾದರ್ ಸಹಿತ ಇತರ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.