×
Ad

ವಿದ್ಯಾರ್ಥಿಗಳ ಸಮಗ್ರ ’ವಿಕಾಸ’ ಗುರಿ

Update: 2016-11-28 17:45 IST

ಮಂಗಳೂರು, ನ.28: ಫಲಿತಾಂಶದಲ್ಲಿ ಎತ್ತಿದ ಕೈ; ಪಠ್ಯೇತರ ಚಟುವಟಿಕೆಗಳಿಗೂ ಸೈ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಶಿಕ್ಷಣ ಕಾಶಿ ಎನಿಸಿದ ಮಂಗಳೂರಿನಲ್ಲಿ ಮೌನಕ್ರಾಂತಿ ಮಾಡುತ್ತಿರುವ ಹೆಗ್ಗಳಿಕೆ ಈ ಕಾಲೇಜಿನದ್ದು. ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಮತ್ತೊಂದು ಹೆಸರು ವಿಕಾಸ್ ಪದವಿ ಪೂರ್ವ ಕಾಲೇಜು. ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಂಗಳೂರಿನ ವಿಕಾಸ್ ಎಜುಕೇಶನ್ ಟ್ರಸ್ಟ್ ಅಲ್ಪ ಕಾಲದಲ್ಲೇ ಅಮೋಘ ಸಾಧನೆ ಮಾಡಿದೆ.

ದೇಶಾದ್ಯಂತ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪರಿಣತಿಯನ್ನು ಸಾಧಿಸಲು ನುರಿತ ಮತ್ತು ಅನುಭವಿ ಉಪನ್ಯಾಸಕ ವೃಂದದವರಿಂದ ವಿಕಾಸ್ ಎಸಿಇ ಕೋಚಿಂಗ್ ನೀಡಲಾಗುವುದು. ಜೆಇಇ ಮೈನ್ಸ್, ಜೆಇಇ ಅಡ್ವಾನ್ಸ್ಡ್, ನೀಟ್ ಅರ್ಹತಾ ಪರೀಕ್ಷೆ, ಆರ್ಕಿಟೆಕ್ಚರ್‌ಗೆ ಸಂಬಂಧಿಸಿದಂತೆ ನಾಟಾ ಪರೀಕ್ಷೆ, ವಿದ್ಯಾರ್ಥಿವೇತನದ ಪ್ರಯೋಜನ ಪಡೆಯಲು ಕೆವಿಪಿವೈ ಪರೀಕ್ಷೆ ಮತ್ತು ಸಿಇಟಿ ಹಾಗೂ ಕಾಮೆಡ್ ಕೆ ಪರೀಕ್ಷೆಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗುವುದು.

ವೃತ್ತಿಪರತೆಯ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಸಮಗ್ರ ವಿಕಾಸದ ಧ್ಯೇಯದೊಂದಿಗೆ ಆರಂಭಗೊಂಡ ವಿಕಾಸ್ ಪದವಿ ಪೂರ್ವಕಾಲೇಜಿನ ಪ್ರಥಮ ಬ್ಯಾಚ್ (ವಿಜ್ಞಾನ ವಿಭಾಗ) ವಿದ್ಯಾರ್ಥಿಗಳು ಶೇ. 100 ಫಲಿತಾಂಶ ದಾಖಲಿಸುವ ಮೂಲಕ ಸಂಸ್ಥೆಯ ಯಶಸ್ಸಿಗೆ ಮುನ್ನುಡಿ ಬರೆದರು. ಅದೇ ಸಾಧನೆಯನ್ನು ಮುಂದುವರಿಸಿಕೊಂಡು ಬರುವ ಹೊಣೆಯನ್ನು ಮುಂದಿನ ಬ್ಯಾಚ್ ವಿದ್ಯಾರ್ಥಿಗಳೂ ಯಶಸ್ವಿಯಾಗಿ ನಿಭಾಯಿಸುತ್ತಾ ಬಂದಿದ್ದಾರೆ.

ಗುರಿ- ಧ್ಯೇಯ

ನಾಲೆಡ್ಜ್ ಇಸ್ ಪವರ್ ಎಂಬ ಘೋಷವಾಕ್ಯದೊಂದಿಗೆ ಅಕ್ಕರೆ ಮತ್ತು ಅನುಶೋಧನೆ ಮೂಲಕ ವಿದ್ಯಾರ್ಥಿಗಳ ಬದುಕಿಗೆ ಭದ್ರ ಬುನಾದಿ ಒದಗಿಸುವುದು ಸಂಸ್ಥೆಯ ಧ್ಯೇಯ. ವಿದ್ಯಾರ್ಥಿಗಳನ್ನು ಪುಸ್ತಕದ ಹುಳುಗಳಾಗಿ ರೂಪಿಸದೇ, ದೇಶದ ಪ್ರಜ್ಞಾವಂತ ನಾಗರಿಕರಾಗಿ ರೂಪಿಸುವುದು, ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಸ್ಫೂರ್ತಿ ನೀಡುವುದು, ಮೌಲ್ಯಯುತ ಶಿಕ್ಷಣದ ಮೂಲಕ ಉತ್ತಮ ಮಾನವೀಯ ಮೌಲ್ಯ ರೂಪಿಸುವುದು, ಪರಿಪೂರ್ಣವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿಯ ನಿಟ್ಟಿನಲ್ಲಿ ಅಹೋರಾತ್ರಿ ಶ್ರಮಿಸುತ್ತಾ ಬಂದಿದೆ. ಇಂಥ ಪರಿಪೂರ್ಣ ವಿಕಾಸಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಸಂಸ್ಥೆ ರೂಪಿಸಿದೆ.

ಸುಸಜ್ಜಿತ ಕ್ಯಾಂಪಸ್

ಮಂಗಳೂರು ವಿಮಾನ ನಿಲ್ದಾಣ ರಸ್ತೆಯ ನಾಲ್ಕು ಎಕರೆ ವಿಶಾಲ ಕ್ಯಾಂಪಸ್ ಹಚ್ಚಹಸಿರಿನಿಂದ ಸುತ್ತುವರಿದಿದೆ. ರೈಲು, ರಸ್ತೆ, ವಾಯು ಹಾಗೂ ಸಾಗರ ಸಾರಿಗೆ ಸಂಪರ್ಕ ಹೊಂದಿರುವ ರಾಜ್ಯದ ಏಕೈಕ ನಗರವಾದ ಮಂಗಳೂರು ಶೈಕ್ಷಣಿಕ ಹಬ್ ಆಗಿ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ವಿಕಾಸ್ ಸಂಸ್ಥೆ ತನ್ನದೇ ಕೊಡುಗೆ ನೀಡುತ್ತಾ ಬಂದಿದೆ. ಸನಿವಾಸ ಕ್ಯಾಂಪಸ್‌ನಲ್ಲಿ ಬಾಲಕ- ಬಾಲಕಿಯರಿಗೆ ಪ್ರತ್ಯೇಕ ವಸತಿಗೃಹ ವ್ಯವಸ್ಥೆ ಇದೆ.

ಕೌನ್ಸೆಲಿಂಗ್

ಪ್ರೌಢಾವಸ್ಥೆಯ ಹಂತದ ಮಕ್ಕಳಿಗೆ ಸೂಕ್ತ ಆಪ್ತ ಸಮಾಲೋಚನೆ ನೀಡುವ ಸಲುವಾಗಿ ವಿಶಿಷ್ಟ ಆಪ್ತ ಸಮಾಲೋಚನಾ ಕೇಂದ್ರವನ್ನೂ ಕ್ಯಾಂಪಸ್ ಹೊಂದಿದೆ. ಈ ಮೂಲಕ ವಿದ್ಯಾರ್ಥಿಗಳ ಮಾನಸಿಕ ತುಮುಲಗಳನ್ನು ತೊಡೆದುಹಾಕಿ ಸದಾ ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಶೈಕ್ಷಣಿಕ ಸಾಧನೆಗೆ ಪೂರಕವಾಗಿ ಜವಾಬ್ದಾರಿಯುತ ವಿದ್ಯಾರ್ಥಿಯಾಗಿ ಪ್ರತಿಯೊಬ್ಬರನ್ನೂ ರೂಪಿಸುವಲ್ಲಿ ಈ ಕೇಂದ್ರ ಮಹತ್ವದ ಕೊಡುಗೆ ನೀಡುತ್ತದೆ. ಪರೀಕ್ಷಾ ಆತಂಕ ನಿರ್ವಹಿಸುವುದು, ಪರೀಕ್ಷಾ ತಂತ್ರಗಳು, ಓದಿನ ಹವ್ಯಾಸ ಸುಧಾರಿಸುವುದು, ಪರಿಣಾಮಕಾರಿಯಾಗಿ ಟಿಪ್ಪಣಿ ತೆಗೆದುಕೊಳ್ಳುವುದು ಹೀಗೆ ವಿವಿಧ ಬಗೆಯ ತರಬೇತಿಯನ್ನು ಈ ಸಲಹಾ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಪ್ರಯೋಗಾಲಯ

ವಿಕಾಸ್ ಕಾಲೇಜಿನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳ ಸುಸಜ್ಜಿತ ಪ್ರಯೋಗಾಲಯಗಳಿವೆ. ಎಲ್ಲ ಬಗೆಯ ರಾಸಾಯನಿಕಗಳನ್ನು ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಿ, ಪ್ರಯೋಗಶೀಲತೆಯನ್ನು ಉತ್ತೇಜಿಸಲಾಗುತ್ತದೆ. ತರಗತಿಗಳಲ್ಲಿ ಪಾಠ ಮಾಡಿದ ವಿಷಯಗಳನ್ನು ತಾವೇ ಪ್ರಯೋಗ ಮಾಡಿ, ಮನದಟ್ಟು ಮಾಡಿಕೊಳ್ಳಲು ಅವಕಾಶವಿದೆ.

ಸಣ್ಣ ಗುಂಪುಗಳಲ್ಲಿ ಪ್ರತಿಯೊಂದು ಪ್ರಯೋಗವೂ ಪರಿಣಾಮಕಾರಿಯಾಗುವಂತೆ ಮಾಡಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಅತ್ಯಾಧುನಿಕ ತಂತ್ರಜ್ಞಾನ ಲಭ್ಯವಾಗಬೇಕು ಎನ್ನುವುದು ಧ್ಯೇಯ. ಸುಸಜ್ಜಿತ ಕಂಪ್ಯೂಟರ್ ಪ್ರಯೋಗಾಲಯವೂ ಇದೆ. ಸುಸಜ್ಜಿತ ಡಿಜಿಟಲ್ ಲೈಬ್ರೆರಿ, ಎ.ಸಿ.ಸೌಲಭ್ಯವಿರುವ ತರಗತಿ, ಎಟಿಎಂ, ಕೆಫೆ, ಪ್ರಥಮ ಚಿಕಿತ್ಸೆಯಂಥ ಸೌಲಭ್ಯಗಳೂ ಕ್ಯಾಂಪಸ್‌ನಲ್ಲಿ ಲಭ್ಯ.

ಶೈಕ್ಷಣಿಕ ಸಾಧನೆ

ಶಿಸ್ತು, ಗುರಿಮುಟ್ಟುವ ತವಕ, ದೃಢ ನಿಶ್ಚಯ, ಕ್ಷೇತ್ರ ನಿರ್ಣಯ, ಛಲಸಾಧನೆಯ ಗುರಿಯನ್ನು ವಿದ್ಯಾರ್ಥಿಗಳ ಮನಸ್ಸಿನ ಪಟಲದಲ್ಲಿ ಮೂಡಿಸಿದ ಸಂಸ್ಥೆಗೆ ಇದೀಗ ಸಾರ್ಥಕತೆಯ ಭಾವನೆ. ವಿಕಾಸ್ ಪದವಿ ಪೂರ್ವಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ 184 ವಿದ್ಯಾರ್ಥಿಗಳ ಪೈಕಿ 107 ವಿದ್ಯಾರ್ಥಿಗಳು ಇಂಜಿನಿಯರಿಂಗ್, 48 ವೈದ್ಯಕೀಯ, 7 ಡೆಂಟಲ್, ಮೂವರು ಆರ್ಕಿಟೆಕ್ಚರ್, 19 ವಿದ್ಯಾರ್ಥಿಗಳು ಇನ್ನಿತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಮೂಲಕ ಸಂಸ್ಥೆಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ.

ವಿಶೇಷ ತರಬೇತಿ

ವಿಕಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ, ವಿಜ್ಞಾನ ಕ್ಷೇತ್ರದಲ್ಲಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಕೋಚಿಂಗ್ ನೀಡಲಾಗುತ್ತಿದೆ. ಶಿಕ್ಷಣಕ್ಕೆ ಪೂರಕವಾದ ಪರಿಸರ ಹಾಗೂ ಅತ್ಯಾಧುನಿಕ ಸೌಲಭ್ಯ ವಿಕಾಸ್ ಪದವಿಪೂರ್ವ ಕಾಲೇಜಿನ ವೈಶಿಷ್ಟ್ಯತೆ. ವಿಶಾಲವಾದ ಕೊಠಡಿ, ಎಲ್‌ಸಿಡಿ ಪ್ರೊಜೆಕ್ಟರ್, ಧ್ವನಿ- ದೃಶ್ಯ ಸಂವಹನ ಸಲಕರಣೆ, ಉತ್ತಮದರ್ಜೆಯ ಪೀಠೋಪಕರಣ, ಕೌನ್ಸಿಲರ್ ಜೊತೆ ವಿದ್ಯಾರ್ಥಿಗಳ ಆಪ್ತ ಸಮಾಲೋಚನೆ ಮತ್ತು ಜೀವ ಕೌಶಲ್ಯಗಳನ್ನು ತಿಳಿಸುವ ಶಿಕ್ಷಣ ಇಲ್ಲಿದೆ.

ವಿಶಾಲ ಕ್ಯಾಂಪಸ್, ಸಿದ್ಧಾಂತ ಮತ್ತು ಪ್ರಾಯೋಗಿಕ ಜ್ಞಾನವನ್ನು ಸಮತೋಲಿತವಾಗಿ ಧಾರೆ ಎರೆಯಬಲ್ಲ ಅನುಭವಿ, ಪಾಂಡಿತ್ಯಪೂರ್ಣ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ವರ್ಗ, ಬುದ್ಧಿವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಓದಿನ ಬಗ್ಗೆ ವಿಶೇಷ ತರಬೇತಿ, ಹಾಗೂ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಉತ್ತಮ ಪುಸ್ತಕಗಳನ್ನು ಹೊಂದಿರುವ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ, ಅತ್ಯಾಧುನಿಕ ತಂತ್ರಜ್ಞಾನ ಆಧರಿತ ವಿಶಾಲ ಪ್ರಯೋಗಾಲಯಗಳು, ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ, ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ಪಿಸಿಎಂಬಿ, ಪಿಸಿಎಂಸಿ, ಪಿ.ಸಿ.ಎಂ.ಎಸ್‌ನೊಂದಿಗೆ ವಾಣಿಜ್ಯ ವಿಷಯದಲ್ಲೂ ಶಿಕ್ಷಣ ನೀಡಲಾಗುತ್ತಿದೆ.

ಸಮಗ್ರ ಮಾರ್ಗದರ್ಶನ

ಕಟ್ಟಡ ನಿರ್ಮಾಣ ಹಾಗೂ ಭೂ ಅಭಿವೃದ್ಧಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ಆಡಳಿತ ನಿರ್ದೇಶಕ, ಮಾಜಿ ಸಚಿವ ಕೃಷ್ಣ.ಜೆ.ಪಾಲೆಮಾರ್‌ರ ಕನಸಿನ ಕೂಸು ವಿಕಾಸ್ ಎಜ್ಯುಕೇಶನ್ ಟ್ರಸ್ಟ್. ಸಂಸ್ಥೆಗೆ ಸೇರ್ಪಡೆಯಾಗುವ ಮಕ್ಕಳು ಕೇವಲ ಶಿಕ್ಷಣ ಪಡೆಯುವುದಕ್ಕೆ ಸೀಮಿತವಾಗಬಾರದು. ಭವಿಷ್ಯದಲ್ಲಿ ಸಮಾಜದ ಯೋಗ್ಯ ನಾಗರಿಕರಾಗಿ ರೂಪುಗೊಳ್ಳಬೇಕು. ಉದ್ಯೋಗದ ಭದ್ರತೆಇರಬೇಕೆನ್ನುವುದು ಅವರ ಆಶಯ.

ಸಮಗ್ರ ವಿಕಾಸ

ವಿದ್ಯಾರ್ಥಿ ಜೀವನದಲ್ಲೇ ಗುರಿಗಳನ್ನು ಆಯ್ಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವೃತ್ತಿ ಮಾರ್ಗದರ್ಶನ ಇಲ್ಲಿನ ಇನ್ನೊಂದು ವೈಶಿಷ್ಟ್ಯ. ನಾಗರಿಕ ಸೇವಾ ಪರೀಕ್ಷೆಗಳ ಬಗ್ಗೆ ಉಪನ್ಯಾಸ, ಎನ್‌ಆರ್‌ಐ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ, ರಾಷ್ಟ್ರೀಯ ಹಬ್ಬಗಳ ಆಚರಣೆ, ಕ್ರೀಡಾಕೂಟಗಳ ಆಯೋಜನೆ, ಪ್ರತಿಭಾ ಪುರಸ್ಕಾರ ಇವುಗಳಲ್ಲಿ ಕೆಲವು. ವಿದ್ಯಾರ್ಥಿಗಳಲ್ಲಿ ಸಂಶೋಧನೆ ಆಸಕ್ತಿ ಮೂಡಿಸುವ ‘ಪಾಂಚ್‌ಸೋ ಕಾ ಜೋಶ್’ ಇನ್ನೊಂದು ಇಂಥ ವಿಶಿಷ್ಟ ಕಾರ್ಯಕ್ರಮ. ಪ್ರತಿ ಶಾಲೆಗಳಿಗೆ 500 ರೂ. ಮೂಲಧನ ನೀಡಿ, ವಿದ್ಯಾರ್ಥಿಗಳು ಆಕರ್ಷಕ, ವಿನೂತನ ಮಾದರಿಗಳನ್ನು ತಯಾರಿಸುವಂತೆ ಉತ್ತೇಜಿಸುವಲ್ಲಿ ಈ ಸ್ಪರ್ಧೆ ಯಶಸ್ವಿಯಾಯಿತು. ಉತ್ತಮ ಬ್ಯುಸಿನೆಸ್ ಮಾಡೆಲ್, ವಿನೂತನ ವಿಜ್ಞಾನ ಮಾದರಿ ಹೀಗೆ ವೈವಿಧ್ಯಮಯ ಮಾದರಿಗಳು ಗಮನ ಸೆಳೆದವು. ಇದೇ ಮಾದರಿಯಲ್ಲಿ ‘ಮೋದಿ ಕೇ ಸಪ್ನೇ ಪೂರೇ ಹುಯೇ ವಿಕಾಸ್ ಮೇ’, ವಿಕಾಸ್ ಕ್ಲಬ್, ಡ್ರೋನ್ ಪ್ಲಾಂಟಿಂಗ್ ಕೂಡಾ ಸಂಸ್ಥೆ ಹಮ್ಮಿಕೊಂಡ ವಿಶಿಷ್ಟ ಕಾರ್ಯಕ್ರಮಗಳು.

ಶಿಕ್ಷಣ ಪ್ರಸಾರ

ರಾಜ್ಯ ಪ್ರೌಢಶಿಕ್ಷಣ ಪಠ್ಯಕ್ರಮವು ಎನ್‌ಸಿಇಆರ್‌ಟಿ ಮಾದರಿಯಲ್ಲಿ ಬದಲಾವಣೆಗೊಂಡಿರುವುದರಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪಠ್ಯಗಳಲ್ಲಿನ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ವಿಕಾಸ್ ಪದವಿ ಪೂರ್ವಕಾಲೇಜು ವಿಜ್ಞಾನ ಮತ್ತು ಗಣಿತ ವಿಷಯಗಳ ‘ಸ್ಕೋರ್ ಈವನ್ ಮೋರ್’ ಎಂಬ ಮಾರ್ಗದರ್ಶಿ ಪುಸ್ತಕವನ್ನು ಹೊರತಂದಿದೆ. ಪುಸ್ತಕದ 25 ಸಾವಿರ ಪ್ರತಿಗಳನ್ನು ಮುದ್ರಿಸಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಹಂಚಿದೆ. ಮಂಗಳೂರು ಮೇರಿಹಿಲ್‌ನಲ್ಲಿರುವ ವಿಕಾಸ್ ಕಾಲೇಜಿನಲ್ಲಿ ವಿಶೇಷತೆಯನ್ನೊಳಗೊಂಡ ನೂತನ ಡಿಜಿಟಲ್ ಗಾರ್ಡನ್ ನಿರ್ಮಿಸಲಾಗಿದೆ. ಸುಮಾರು 30 ಗಿಡಗಳನ್ನು ಡಿಜಿಟಲ್ ಮಾದರಿಯಲ್ಲಿ ಸಿದ್ಧಗೊಳಿಸಲಾಗಿದ್ದು, ಇನ್ನೂ 70 ಗಿಡಗಳಿಗೆ ಇದನ್ನು ಅನ್ವಯಿಸುವ ಗುರಿ ಇದೆ. ವೆಬ್‌ಸೈಟ್‌ಗೆ ಲಿಂಕ್ ಒದಗಿಸುವ ಮೂಲಕ ಮೊಬೈಲ್‌ನಲ್ಲಿರುವ ಆ್ಯಪ್ ಸಹಾಯದಿಂದ ಗಿಡಗಳ ಮುಂಭಾಗದಲ್ಲಿ ನಿರ್ದಿಷ್ಟ ಗಿಡದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಪಡೆದುಕೊಳ್ಳುವ ಈ ಮಾದರಿಯು ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ರಾಜ್ಯದಲ್ಲೇ ಪ್ರಥಮವಾಗಿದೆ.

COURSES OFFERED

SCIENCE

PCMB - Group I

Languages: English/

Kannada/ Hindi/ Sanskrit

Group II

Optional Subjects:

Physics, Chemistry, Mathematics

and Biology (PCMB)

PCMS - Group I

Languages: English/

Kannada/ Hindi/ Sanskrit

Group II

Optional Subjects:

Physics, Chemistry, Mathematics

and Statistics (PCMS)

PCMC - Group I

Languages: English/

Kannada/ Hindi/ Sanskrit

Group II

Optional Subjects:

Physics, Chemistry,

Mathematics and

Computer Science (PCMC)

COMMERCE

Group I - Languages: English/

Kannada/ Hindi / Sanskrit

Group II - Optional Subjects:

Business Studies, Accountancy,

Statistics & Basic Maths

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News