×
Ad

ಪಿಒಎಸ್ ಯಂತ್ರದ ಮೇಲಿನ ಅಬಕಾರಿ ಸುಂಕ ರದ್ದು

Update: 2016-11-28 18:18 IST

ಹೊಸದಿಲ್ಲಿ,ನ.28: 500 ಮತ್ತು 1,000 ರೂ.ನೋಟುಗಳ ನಿಷೇಧದ ಬಳಿಕ ನಗದು ಕೊರತೆಯಿಂದಾಗಿ ವ್ಯಾಪಾರಿಗಳು ಪಾಯಿಂಟ್ ಆಫ್ ಸೇಲ್(ಪಿಒಎಸ್) ಯಂತ್ರಗಳನ್ನು ಬಳಸುವುದು ಅನಿವಾರ್ಯವಾಗುತ್ತಿದೆ,ಹೀಗಾಗಿ ಅವುಗಳಿಗೆ ಭಾರೀ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಸೋಮವಾರ ಪಿಒಎಸ್‌ಗಳ ತಯಾರಿಕೆಯಲ್ಲಿ ಅಗತ್ಯ ವಸ್ತುಗಳ ಮೇಲಿನ ಅಬಕಾರಿ ಸುಂಕವನ್ನು ತೆಗೆದುಹಾಕಿದೆ.

ಪಿಒಎಸ್ ಯಂತ್ರಗಳಿಗೆ 2017 ಮಾ.31ರವರೆಗೆ ಶೇ.12.5 ಅಬಕಾರಿ ಸುಂಕ ಮತ್ತು ಶೇ.4 ವಿಶೇಷ ಹೆಚ್ಚುವರಿ ಸುಂಕ(ಎಸ್‌ಎಡಿ)ದಿಂದ ವಿನಾಯಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 ಈ ಸಂಬಂಧ ಅಧಿಸೂಚನೆಯನ್ನು ವಿತ್ತಸಚಿವ ಅರುಣ್ ಜೇಟ್ಲಿ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದರು.

ಮಾರಾಟ ಮಾಡಿದ ವಸ್ತುಗಳ ಹಣಪಾವತಿಯನ್ನು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಸ್ವೀಕರಿಸಲು ವ್ಯಾಪಾರಿಗಳಿಂದ ಪಿಒಎಸ್ ಯಂತ್ರಗಳ ಬಳಕೆ ಹೆಚ್ಚುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News