ಎಸ್‌ಬಿಐ ಎಟಿಎಂನಲ್ಲಿ 2,000 ರೂ. ಡ್ರಾ ಮಾಡಿದವರಿಗೆ 3,000 ರೂ. ಸಿಕ್ಕಿತು ..!
Update: 2016-11-28 18:25 IST
ಬೆಂಗಳೂರು, ನ.28: ನಗರದ ಜೆ.ಜೆ. ನಗರದ ಪೊಲೀಸ್ ರಾಣೆಯ ಮುಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂನಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಇಂದು 2,000 ರೂ. ಡ್ರಾ ಮಾಡಲು ಹೋದವರಿಗೆ 3,000 ರೂ. ಸಿಕ್ಕಿದೆ.
ಈ ವಿಷಯ ಗೊತ್ತಾಗುತ್ತಿದ್ದಂತೆ ಎಟಿಎಂ ಸೆಕ್ಯೂರಿಟಿ ಗಾರ್ಡ್ ಬ್ಯಾಂಕ್ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಬಳಿಕ ಎಟಿಎಂನ್ನು ಬಂದ್ ಮಾಡಲಾಯಿತು. ಈ ನಡುವೆ ಐದು ಮಂದಿ ಸದ್ದಿಲ್ಲದೆ ತಲಾ ಮೂರು ಸಾವಿರ ಡ್ರಾ ಮಾಡಿ ತೆರಳಿದ್ದರು.