ಪುಟ್ಟ ಹಸುಳೆ ಶಸ್ತ್ರ ಚಿಕಿತ್ಸೆಗೆ ಬೇಕಿದೆ ಸಹಾಯ ಹಸ್ತ

Update: 2016-11-28 13:19 GMT

ಮಂಗಳೂರು, ನ.28: ನಗರದ ಬೈಕಂಪಾಡಿಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿರುವ ಚಂದ್ರು ಎಂಬವರ ಎರಡು ತಿಂಗಳ ಹಸುಳೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಅಸಹಾಯಕ ಸ್ಥಿತಿಯಲ್ಲಿರುವ ಪೋಷಕರು ಸಹೃದಯಿಗಳ ಸಹಾಯ ಹಸ್ತ ಕೋರಿದ್ದಾರೆ.

ಮೂಲತ ಶಿವಮೊಗ್ಗದ ನಿವಾಸಿ ಹಾಗೂ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಚಂದ್ರು ಅವರು ಪ್ರಸ್ತುತ ಬೈಕಂಪಾಡಿಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಹಸುಳೆ ಶ್ರುತಿ ಜತೆ ವಾಸವಾಗಿದ್ದಾರೆ. ಎರಡು ತಿಂಗಳ ಹಸುಳೆ ಶ್ರುತಿಯು ಶ್ವಾಸಕೋಶದ ಬೆಳವಣಿಗೆಯಾಗದೆ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾಳೆ. ಶರೀರದ ರಕ್ತ ಕೆಟ್ಟು ಹೋಗಿದ್ದು, ಹೃದಯದಲ್ಲಿ ರಂಧ್ರವೂ ಇರುವುದಾಗಿ ವೈದ್ಯರು ಹೇಳಿದ ಕಾರಣ, ಪೋಷಕರು ಈಗಾಗಲೇ ಹಸುಳೆಗೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಚಿಕಿತ್ಸೆಗೆ ಸುಮಾರು 3 ಲಕ್ಷ ರೂ. ಖರ್ಚು ಮಾಡಿದ್ದು, ಆರೋಗ್ಯ ಸುಧಾರಿಸಿಲ್ಲ. ಏಳೆಂಟು ವೈದ್ಯರು ಹಸುಳೆಯ ತಪಾಸಣೆ ನಡೆಸಿ ಆರೋಗ್ಯ ಸುಧಾರಿಸಲು, ಉಳಿಸಲು ಶಸ್ತ್ರ ಚಿಕಿತ್ಸೆಯೇ ಅನಿವಾರ್ಯ ಎಂದು ಸಲಹೆ ನೀಡಿದ್ದಾರೆ. ಈ ಶಸ್ತ್ರ ಚಿಕಿತ್ಸೆಗೆ ಸುಮಾರು 15 ಲಕ್ಷ ರೂ. ವೆಚ್ಚವಾಗಬಹುದು ಎಂದೂ ಹೇಳಿದ್ದಾರೆ. ಆರ್ಥಿಕವಾಗಿ ಬಡವರಾಗಿರುವ ಚಂದ್ರು ಕುಟುಂಬಕ್ಕೆ ಈ ಖರ್ಚನ್ನು ಭರಿಸಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಸ್ನೇಹಿತರ ಸಲಹೆಯ ಮೇರೆಗೆ ಇದೀಗ ಸಹೃದಯಿಗಳಿಂದ ನೆರವಿಗಾಗಿ ಚಂದ್ರು ಅವರು ಮೊರೆ ಹೋಗಿದ್ದಾರೆ.

ನೆರವು ನೀಡಲಿಚ್ಚಿಸುವವರು ಚಂದ್ರು ಅವರ ಮೊಬೈಲ್ ಸಂಖ್ಯೆ 9742788877. ಕೆನರಾ ಬ್ಯಾಂಕ್ ಪಂಪ್‌ವೆಲ್ ಶಾಖೆಯ ಉಳಿತಾಯ ಖಾತೆ ಸಂಖ್ಯೆ- 1819101028065. ಐಎಫ್‌ಎಸ್‌ಇ ನಂ.: CNRB 0001819.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News