ನಗದು ಕೊರತೆ ಬಿಕ್ಕಟ್ಟಿನ ಜೊತೆಜೊತೆಗೇ ವೇತನ ದಿನಕ್ಕೆ ಸಜ್ಜಾಗುತ್ತಿರುವ ಬ್ಯಾಂಕುಗಳು
Update: 2016-11-28 19:18 IST
ಕೋಲ್ಕತಾ,ನ,28: ನೌಕರ ವರ್ಗದವರ ವೇತನ ಪಾವತಿಯ ದಿನಗಳು ಸನ್ನಿಹಿತ ವಾಗುತ್ತಿದ್ದು, ಗ್ರಾಹಕರು ವೇತನದ ಹಣವನ್ನು ಪಡೆದುಕೊಳ್ಳಲು ಭಾರೀ ಸಂಖ್ಯೆಯಲ್ಲಿ ಬ್ಯಾಂಕುಗಳಿಗೆ ಲಗ್ಗೆ ಹಾಕುವ ನಿರೀಕ್ಷೆಯಿದೆ. ನಗದು ಕೊರತೆಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಬ್ಯಾಂಕುಗಳು ಈಗ ಬೃಹತ್ ಗ್ರಾಹಕರ ಸಂದಣಿಯನ್ನು ಎದುರಿಸಲು ಸಜ್ಜಾಗುತ್ತಿವೆ.
ಗ್ರಾಹಕರ ವೇತನ ಮತ್ತು ಪಿಂಚಣಿಯನ್ನು ಪಾವತಿಸಲು ಸಾಧ್ಯವಾಗುವಂತೆ ಹೆಚ್ಚಿನ ಹಣವನ್ನು ಒದಗಿಸುವಂತೆ ಬ್ಯಾಂಕುಗಳು ಆರ್‌ಬಿಐ ಅನ್ನು ಕೇಳಿಕೊಂಡಿವೆ, ಜೊತೆಗೆ ಶಾಖೆಗಳಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನೂ ತೆರೆಯಲು ಅವು ಉದ್ದೇಶಿಸಿವೆ.
ಗ್ರಾಹಕರ ಸೇವೆಗಾಗಿ ಎಸ್‌ಬಿಐ ಶಾಖೆಗಳು ನಿಗದಿತ ಸಮಯಕ್ಕಿಂತ ಮೊದಲೇ ತೆರೆಯಲಿವೆ ಎಂದು ಎಸ್‌ಬಿಐನ ಸ್ಥಳೀಯ ಮುಖ್ಯಕಚೇರಿಯ ಹಿರಿಯ ಅಧಿಕಾರಿ ಯೋರ್ವರು ತಿಳಿಸಿದರು.