ಮಣಿಪಾಲದಲ್ಲಿ ಆ್ಯಪಲ್ ಪ್ರಯೋಗಾಲಯ ಸ್ಥಾಪನೆ

Update: 2016-11-28 13:51 GMT

ಉಡುಪಿ, ನ.28: ಮಣಿಪಾಲದ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್‌ನಲ್ಲಿ ನೂತನ ತಂತ್ರಜ್ಞಾನ ಹೊಂದಿರುವ ಆ್ಯಪಲ್ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ ಎಂದು ಸಂಸ್ಥೆಯ ಅಕಾಡೆಮಿಕ್ ಕೋಆರ್ಡಿನೇಟರ್ ಟಿ.ರಂಗ ಪೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಪ್ರಯೋಗಾಲಯ ದಲ್ಲಿ ನೂತನ ಮ್ಯಾಕ್ ಒಎಸ್ ಮತ್ತು ಎಕ್ಸ್ ಕೋಡ್ ಹೊಂದಿರುವ 16 ಆ್ಯಪಲ್ ಐಮ್ಯಾಕ್ ಕಂಪ್ಯೂಟರ್‌ಗಳಿದ್ದು, ಉತ್ತಮ ಭೋದಕರಿಂದ ಐಒಎಸ್ ಆ್ಯಪ್ ಅಭಿವೃದ್ಧಿ ಪಡಿಸುವ ಕೋರ್ಸ್ ಆರಂಭಿಸಲಾಗಿದೆ. ಈ ಕೋರ್ಸ್ ನಿರಂತರವಾದ 80 ಗಂಟೆಗಳ ಅವಧಿ ಹೊಂದಿರುವ ತರಬೇತಿಯಾಗಿದ್ದು, ಡಿ.17ರಿಂದ 26ರತನಕ ನಡೆಯಲಿದೆ ಎಂದರು.

ಈ ಕೋರ್ಸ್ ಎಕ್ಸ್‌ಕೋಡ್, ಪ್ಲೇಗ್ರೌಂಡ್, ಸ್ಪಿಫ್ಟ್, ಸ್ಟೋರಿ ಬೋರ್ಡಿಂಗ್ ಮುಂತಾದ ಪ್ರೊಗ್ರಾಮಿಂಗ್‌ಗಳನ್ನು ಹೇಳಿಕೊಡಲಿದೆ. ಕಲಿಕೆಯೊಂದಿಗೆ, ಅನುಭವವನ್ನು ಹೊಂದುವ ಅವಕಾಶವಿರುತ್ತದೆ. ಕೋರ್ಸ್‌ನ ಅವಧಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಕಾರ್ಯನಿರ್ವಹಿಸುವ ಐಒಎಸ್ ಆ್ಯಪ್‌ನ್ನು ಅಭಿವೃದ್ಧಿಪಡಿಸುವ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 94480 08877, ಇಮೇಲ್:info@dheemahi.netನ್ನು ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಾಂಶುಪಾಲ ನರೇಂದ್ರ ಪೈ, ಸಂಜೀವ ಜೋದ್‌ಪುರ್, ಸುಹಾನ್ ಕಿಣಿ, ವಾದಿರಾಜ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News