×
Ad

ಶಾಂತಿಪಾಲನಾ ಸೈನಿಕರಿಗೆ ಉತ್ತಮ ತರಬೇತಿಯ ಅಗತ್ಯ

Update: 2016-11-28 20:17 IST

ಬೀಜಿಂಗ್, ನ. 28: ವಿಶ್ವಸಂಸ್ಥೆಯ ಶಾಂತಿಪಾಲನಾ ಸೈನಿಕರಿಗೆ ಉತ್ತಮ ತರಬೇತಿ ನೀಡುವ ಹಾಗೂ ಮಾನವಹಕ್ಕುಗಳ ಬಗ್ಗೆ ಅವರು ಹೆಚ್ಚಿನ ಗೌರವ ಹೊಂದುವಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಆಗಮನ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಸೋಮವಾರ ಹೇಳಿದ್ದಾರೆ.

ಶಾಂತಿಪಾಲನಾ ಪಡೆಯ ಸೈನಿಕರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಗಮನಹರಿಸುವಂತೆ ವಿಶ್ವಸಂಸ್ಥೆಯ ಮೇಲೆ ಒತ್ತಡ ಇರುವುದನ್ನು ಸ್ಮರಿಸಬಹುದಾಗಿದೆ.

ಬೀಜಿಂಗ್‌ನಲ್ಲಿ ಚೀನಾದ ವಿದೇಶ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದ ಬಳಿಕ ಅವರು ಮಾತನಾಡುತ್ತಿದ್ದರು.

ವಿಶ್ವಸಂಸ್ಥೆಯ ನಿಯೋಜಿತ ಮಹಾಕಾರ್ಯದರ್ಶಿ ನಿರ್ಗಮನ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಸ್ಥಾನದಲ್ಲಿ ಜನವರಿ 1ರಂದು ಅಧಿಕಾರ ವಹಿಸಿಕೊಳ್ಳಲಿರುವರು.

ಜಗತ್ತಿನಾದ್ಯಂತದ ಸಂಘರ್ಷಗಳಲ್ಲಿ ಚೀನಾ ಮಹತ್ವದ ಶಾಂತಿ ದೂತನಾಗಿ ಕಾರ್ಯನಿರ್ವಹಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿಶ್ವಸಂಸ್ಥೆಯ ವಿವಿಧ ಭಾಗಗಳು ‘ಒಂದೇ ಉದ್ದೇಶಕ್ಕಾಗಿ ಕೆಲಸ ಮಾಡುವುದನ್ನು’ ಖಾತರಿಪಡಿಸಲು ತಾನು ಬಯಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಟರಸ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News