×
Ad

ನೋಟುಗಳ ನಕಲಿ ಪ್ರತಿ ಸುಟ್ಟು ಪ್ರತಿಭಟನೆ

Update: 2016-11-28 20:41 IST

ಕುಂದಾಪುರ, ನ.28: ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ನೋಟು ರದ್ಧತಿಯಿಂದ ಜನಸಾಮಾನ್ಯರಿಗೆ ಆಗಿರುವ ತೊಂದರೆ ಯನ್ನು ವಿರೋಧಿಸಿ ಸೋಮವಾರ ಕುಂದಾಪುರ ಶಾಸ್ತ್ರಿ ಸರ್ಕಲ್‌ನಲ್ಲಿ ಹಮ್ಮಿ ಕೊಳ್ಳಲಾದ ಆಕ್ರೋಶ್ ದಿವಸ್ ಪ್ರತಿಭಟನೆಯಲ್ಲಿ ನೋಟುಗಳ ನಕಲಿ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.

ಯುವ ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ಡೆ ಮಾತನಾಡಿ, ಇಂದು ಬ್ಯಾಂಕ್‌ಗಳ ಮುಂದೆ ಶ್ರೀಮಂತರು, ಕಪ್ಪು ಹಣ ಹೊಂದಿದವರು ಇಲ್ಲ. ತುತ್ತು ಊಟಕ್ಕೂ ತತ್ವಾರ ಎದುರಿಸುತ್ತಿರುವ ಬಡವರು ಬೆವರು ಸುರಿಸಿ ದುಡಿದ ಹಣವನ್ನು ಪಡೆಯಲು ಉರಿ ಬಿಸಿಲಿನಲ್ಲಿ ನಿಲ್ಲುವ ಪರಿಸ್ಥಿತಿ ಬಂದೊ ದಗಿದೆ. ದೇಶದ ಜನರನ್ನು ಬೀದಿಗೆ ತಳ್ಳಿದ್ದು ಪ್ರಧಾನಿ ಮೋದಿಯವರ ಸಾಧನೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಬಿ.ಹಿರಿಯಣ್ಣ , ಯುವ ಕಾಂಗ್ರೆಸ್ ಅಧ್ಯಕ್ಷ ನಿಶ್ಚಿತ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಪುರಸಭಾ ಸದಸ್ಯರಾದ ದೇವಕಿ ಶೆಣೈ, ಶ್ರೀಧರ ಶೇರಿಗಾರ್, ಮುಖಂಡರಾದ ರೇವತಿ ಶೆಟ್ಟಿ, ಜಾಕೋಬ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News