ಅಪಘಾತ: ಆರು ಮಂದಿಗೆ ಗಾಯ
Update: 2016-11-28 21:49 IST
ಕೊಲ್ಲೂರು, ನ.28: ಕೊಲ್ಲೂರು ಗ್ರಾಮದ ಅರಣ್ಯ ನರ್ಸರಿ ಬಳಿ ನ.27 ರಂದು ಮಧ್ಯಾಹ್ನ ವೇಳೆ ಎರಡು ಕಾರುಗಳ ಮಧ್ಯೆ ಸಂಭವಿಸಿದ ಅಪಘಾತ ದಲ್ಲಿ ಗಾಯಗೊಂಡಿದ್ದಾರೆ.
ಹೊಸನಗರದ ನಿಟ್ಟೂರಿನಿಂದ ಶಂಕರನಾರಾಯಣಕ್ಕೆ ಬರುತ್ತಿದ್ದ ಓಮ್ನಿ ಕಾರಿಗೆ ಎದುರಿನಿಂದ ಬರುತ್ತಿದ್ದ ಕಾರೊಂದು ಢಿಕ್ಕಿ ಹೊಡೆಯಿತು. ಇದರಿಂದ ಓಮ್ನಿ ಕಾರಿನಲ್ಲಿದ್ದ ನಿಟ್ಟೂರಿನ ರಾಮಕೃಷ್ಣ ಚಾತ್ರ ಹಾಗೂ ಅವರ ಪತ್ನಿ ಶಶಿಕಲಾ ಮತ್ತು ಇನ್ನೊಂದು ಕಾರಿನಲ್ಲಿದ್ದ ಚಾಲಕ ವಿಜಯ, ಶೋಭಾ, ಪ್ರೇಮಾ, ನವೀನ್ ಎಂಬವರು ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.