×
Ad

ಬಂಟ್ವಾಳ: ಜಮೀಯ್ಯತುಲ್ ಫಲಾಹ್‌ನಿಂದ ಜಲಸಾಕ್ಷರತಾ ಕಾರ್ಯಾಗಾರ

Update: 2016-11-29 15:58 IST

ಬಂಟ್ವಾಳ, ನ.29: ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬೋಗೋಡಿಯ ದ.ಕ. ಜಿಪಂ ಶಾಲೆಯಲ್ಲಿ ಜಲಸಾಕ್ಷರತಾ ಮಾಹಿತಿ ಕಾರ್ಯಾಗಾರವನ್ನು ಇತ್ತೀಚೆಗೆ ಏರ್ಪಡಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ಎಂ. ಬಾಯಾರ್, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುಂಞ ನಾಯಕ್, ಜಲ ಸಂರಕ್ಷಣೆಯ ಬಗ್ಗೆ ವಿಷಯ ಮಂಡಿಸಿದರು.

ಕಾರ್ಯಾಗಾರದಲ್ಲಿ ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಕೋಶಾಧಿಕಾರಿ ಎಂ.ಎಚ್.ಇಕ್ಬಾಲ್, ಶಾಲಾ ಮುಖ್ಯೋಪಾಧ್ಯಾಯ ವೆಂಕಟ್ ರಾವ್, ಬಂಟ್ವಾಳ ಪುರಸಭಾ ಸದಸ್ಯೆ ಜೆಸಿಂತಾ ಡಿಸೋಜ, ನಾಮನಿರ್ದೇಶಿತ ಸದಸ್ಯ ಅಬೂಬಕರ್ ಸಿದ್ದೀಕ್ ಗುಡ್ಡೆಯಂಗಡಿ, ಎನ್‌ಜೆಎಂ ಅಧ್ಯಕ್ಷ ಹಾಜಿ ಮುಹಿಯುದ್ದೀನ್, ಪುರಸಭೆ ಮಾಜಿ ಸದಸ್ಯ ಹಾಜಿ ಮುಹಮ್ಮದ್ ರಫೀಕ್, ಎನ್‌ಜೆಎಂ ಸದಸ್ಯ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.

ನಿಸಾರ್ ಬೋಗೋಡಿ ಸ್ವಾಗತಿಸಿದರು. ಮುಹಮ್ಮದ್ ಶಹೀದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News