ಡಿ.5ರಂದು ದಾರುಲ್ ಅಮಾನ್‌ನಲ್ಲಿ ಮೀಲಾದ್ ಜಲ್ಸ
Update: 2016-11-29 16:27 IST
ಉಡುಪಿ, ನ.29: ಎಲ್ಲೂರಿನ ಹಿರಾ ನಗರದಲ್ಲಿರುವ ದಾರುಲ್ ಅಮಾನ್‌ಎಜುಕೇಶನಲ್ ಅಕಾಡಮಿಯ ಆಶ್ರಯದಲ್ಲಿ ಮೀಲಾದ್ ಜಲ್ಸ ಕಾರ್ಯಕ್ರಮವು ಡಿಸಂಬರ್ 5ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಮಾಣಿ ಉಸ್ತಾದ್ ದುಆ ನೆರವೇರಿಸುವರು. ಅಲ್ಹಾಜ್ ಸಲೀಂ ಮದನಿ ಕುತ್ತಾರು ನೇತೃತ್ವ ನೀಡಲಿದ್ದಾರೆ. ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಲಿರುವರು.
ಕಾರ್ಯಕ್ರಮದಲ್ಲಿ ಪ್ರಮುಖ ಉಲಮಾ, ಉಮರಾ ನಾಯಕರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ