ಉಜಿರೆಯಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನ
ಬೆಳ್ತಂಗಡಿ,ನ.29; ಕನ್ನಡ ಸಾಹಿತ್ಯ ಪರಿಷತ್ತು 100 ವರ್ಷ ಪೂರೈಸಿ ಶತಮಾನೋತ್ಸವದ ಉತ್ತರಾರ್ಧದ ಈ ಸಂದರ್ಭದಲ್ಲಿ ದ.ಕ. ಜಿಲ್ಲಾ 21ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಳ್ತಂಗಡಿ ತಾಲೂಕು ಉಜಿರೆಯ ಜನಾರ್ದನ ಸ್ವಾಮಿ ದೇವಾಲಯದ ಆವರಣದಲ್ಲಿ ಜ 27,28,ಹಾಗೂ29 ರಂದು ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲಾಗುವುದೆಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪಕುಮಾರಕಲ್ಕೂರ ತಿಳಿಸಿದ್ದಾರೆ.
ವಿಶೇಷವಾಗಿ ಈ ಬಾರಿ ಕಾಸರಗೋಡು, ದಕ್ಷಿಣಕನ್ನಡ ಹಾಗೂ ಉಡುಪಿ ಮೂರು ಜಿಲ್ಲೆಗಳ ಸಮಷ್ಠಿ ದೃಷ್ಟಿಯನ್ನು ಗಮನದಲ್ಲಿರಿಸಿ ಕಾರ್ಯಕ್ರಮರೂಪಿಸಲಾಗಿದೆ.
ಪೂರ್ವಭಾವಿ ಸಭೆ :
ಈ ಬಗ್ಗೆ ಪೂರ್ವಭಾವಿ ಸಭೆನವೆಂಬರ್ 30-11-2016 ಬುಧವಾರ ಸಂಜೆ 4 ಗಂಟೆಗೆರಾಮಕೃಷ್ಣ ಸಭಾಂಗಣ ಶ್ರೀ ಜನಾರ್ದನದೇವಸ್ಥಾನ ಉಜಿರೆ ಇಲ್ಲಿ ಜನಾರ್ದನದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ವಿಜಯರಾಘವ ಪಡುವೆಟ್ನಾಯರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ತಾಲೂಕು ಸಾಹಿತ್ಯ ಪರಿಷತ್ತಿನಅಧ್ಯಕ್ಷರಾದಡಾ. ಬಿ. ಯಶೋವರ್ಮರವರ ಗೌರವ ಉಪಸ್ಥಿತಿಯಲ್ಲಿ ಜರಗಲಿದೆ. ಸಾಹಿತ್ಯಾಸಕ್ತರು, ಅಭಿಮಾನಿಗಳು ಬಂದು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ. ಮಾಹಿತಿಗಾಗಿ ಜಿಲ್ಲಾಗೌರವ ಕಾರ್ಯದರ್ಶಿ ಡಾ. ಎಂ.ಪಿ. ಶ್ರೀನಾಥ್ (9448558583)ರವರನ್ನು ಸಂಪರ್ಕಿಸಬಹುದು.