ಉಳ್ಳಾಲ:ರಾಮರಾಜ ಕ್ಷತ್ರಿಯ ಸೇವಾ ಸಂಘದ ತೃತೀಯ ವಾರ್ಷಿಕೋತ್ಸವ
ಉಳ್ಳಾಲ, ನ.29: ಉಳ್ಳಾಲ ವಲಯದ ರಾಮರಾಜ ಕ್ಷತ್ರಿಯ ಸೇವಾ ಸಂಘ ಇದರ ತೃತೀಯ ವಾರ್ಷಿಕೋತ್ಸವವು ಕೋಟೆಕಾರಿನ ಶೃಂಗೇರಿ ಶಂಕರ ಮಠದ ಆವರಣದಲ್ಲಿ ಮಂಗಳವಾರ ನಡೆಯಿತು.
ಕುಂದಾಪುರದ ಉದ್ಯಮಿ ಹಾಗೂ ಶ್ರೀ ರಾಮ ಕ್ರೆಡಿಟ್ ಕಾ-ಆಪರೇಟೀವ್ ಸೊಸೈಟಿ ಇದರ ಅಧ್ಯಕ್ಷ ನಾಗರಾಜ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಂಗಳೂರು ಬನ್ನೇರುಘಟ್ಟ ಅಪೋಲೊ ಆಸ್ಪತ್ರೆಯ ಹಿರಿಯ ಹೃದಯ ರೋಗ ತಜ್ಞ ಡಾ. ಕೆ.ಬಿ. ಪ್ರಸಾದ್ , ಉದ್ಯಮಿ ರಾಮಚಂದ್ರ ಕೆ.ಎಸ್. , ಕೋಟೆಕಾರು ಶಾಖಾ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ, ದ.ಕ. ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಕೆ.ಎನ್. ಸುಧಾಕರ, ಹೆಜಮಾಡಿ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಹರಿಶ್ಚಂದ್ರ, ಬೆಂಗಳೂರಿನ ಪೂರ್ಣಿಮ ಕೃಷ್ಣ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗೌರವ ಅಧ್ಯಕ್ಷರಾದ ಭಾಸ್ಕರ ಕೀಕಾನ, ಉಪಾಧ್ಯಕ್ಷರುಗಳಾದ ಕೆ.ಪಿ. ಸೋಮಶೇಖರ್, ಪಿ. ಶ್ಯಾಮ್ ಸುಂದರ್, ಜೊತೆ ಕಾರ್ಯದರ್ಶಿಗಳಾದ ನಂದ ಕುಮಾರ್ ಕುತ್ತಾರು, ಚಂದ್ರಶೇಖರ.ಟಿ, ಮಹಿಳಾ ಅಧ್ಯಕ್ಷೆ ಶಾಂತಿ ಭಾಸ್ಕರ ಕೀಕಾನ ಉಪಸ್ಥಿತರಿದ್ದರು. ಯೋಗೀಶ್ ಮಲ್ಲಿಗೆಮಾಡು, ಸೌಮ್ಯ ಸತ್ಯನಾರಾಯಣ ಹೂಡೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಅಧ್ಯಕ್ಷರಾದ ಸೀತಾರಾಮ ಕೊಪ್ಪಲ್ ಸ್ವಾಗತಿಸಿದರು. ಕಾರ್ಯದರ್ಶಿ ಸತ್ಯನಾರಾಯಣ ಹೂಡೆ ವರದಿ ವಾಚಿಸಿದ ರು . ದಿವ್ಯಾ ರಾಕೇಶ್ ವಂದಿಸಿದರು.
ಬಳಿಕ ಸ್ವಜಾತಿ ಬಾಂಧವ ಮಕ್ಕಳಿಂದ ಮತ್ತು ಮಹಿಳಾ ವೃಂದದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅರುಣ , ಕುಮಾರಿ ಲಾವಣ್ಯ ಮತ್ತು ನವ್ಯಾ ಇವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.