ಡಿಸೆಂಬರ್ 2,3: ಅಲ್ ಮದೀನದಲ್ಲಿ ಬೃಹತ್ ಹುಬ್ಬುರ್ರಸೂಲ್ ಕಾನ್ಫರೆನ್ಸ್
ನರಿಂಗಾನ,ನ.29: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಆಶ್ರಯದಲ್ಲಿ ಇದೇ ಡಿಸೆಂಬರ್2 ಮತ್ತು 3ರಂದು ಬೃಹತ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಡೆಯಲಿದೆ. ಡಿಸೆಂಬರ್ 2ರಂದು ಸಾಯಂಕಾಲ 5ಗಂಟೆಗೆ ಧ್ವಜಾರೋಹಣದ ಬಳಿಕ 6.30ಕ್ಕೆ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭವನ್ನು ಖಾಝಿ ಬೇಕಲ ಉಸ್ತಾದ್ ಉದ್ಘಾಟಿಸಲಿದ್ದಾರೆ.7.30ಕ್ಕೆ ಸಯ್ಯಿದ್ ಇಸ್ಮಾಈಲ್ ತಂಙಳ್ ಉಜಿರೆ ಇವರ ನೇತೃತ್ವದಲ್ಲಿ ಹಾಗೂ ಇನ್ನಿತರ ಸಾದಾತುಗಳು ಹಾಗೂ ವಿದ್ವಾಂಸರ ಸಂಗಮದಲ್ಲಿ ಬೃಹತ್ ಮೌಲಿದ್ ಮಜ್ಲಿಸ್ ನಡೆಯಲಿದೆ. ರಾತ್ರಿ8ಕ್ಕೆ ಆಶಿಕುರ್ರಸೂಲ್ ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿ ಕೋಯ ತಂಙಳ್ ರವರ ನೇತೃತ್ವದಲ್ಲಿ ದ್ಸಿಕ್ರ್, ಸ್ವಲಾತ್ ಹಾಗೂ ಕೂಟು ಪ್ರಾರ್ಥನೆ ನಡೆಯಲಿದೆ, ಖ್ಯಾತ ವಾಗ್ಮಿ ರಫೀಖ್ ಸಅದಿ ದೇಲಂಪಾಡಿ ಹಾಗೂ ಸಿದ್ದೀಖ್ ಸಖಾಫಿ ಬಾಯಾರ್ ಉದ್ಬೋಧನೆ ನೀಡಲಿದ್ದಾರೆ. ಡಿಸೆಂಬರ್ 3ರಂದು ಸಾಯಂಕಾಲ 6.30ಕ್ಕೆ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆದೊಂದಿಗೆ, ಝೈನುಲ್ ಉಲಮಾ ಮಾಣಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯುವ ಮದ್‌ಹುರ್ರಸೂಲ್ ಸಮ್ಮೇಳನವನ್ನು ಆಹಾರ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಖ್ಯಾತ ವಾಗ್ಮಿ ಡಾ. ಫಾರೂಖ್ ನಈಮೀ ಕೊಲ್ಲಂ ಮುಖ್ಯ ಭಾಷಣ ಮಾಡಲಿದ್ದಾರೆ. ಡಾ.ಯು.ಟಿ. ಇಫ್ತಿಕಾರ್ ಅಲಿ ಮುಖ್ಯ ಅತಿಥಿಯಾಗಿ ಭಾಗಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಲಮಾ-ಉಮರಾ ಗಣ್ಯರು, ಸುನ್ನೀ ಸಂಘಟನಾ ನೇತಾರರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚೆಯರ್ಮಾನ್ ಎಸ್.ಕೆ.ಖಾದರ್ ಹಾಜಿ ಮುಡಿಪು ತಿಳಿಸಿದ್ದಾರೆ.