ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್‌ಗೆ ಆಯ್ಕೆ
Update: 2016-11-29 19:52 IST
ಮೂಡುಬಿದಿರೆ,ನ.29: ನ್ಯೂಜಿಲ್ಯಾಂಡ್‌ನಲ್ಲಿ ಡಿ. 4ರಿಂದ 11ರವರೆಗೆ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮೂಡುಬಿದಿರೆ ಪೋಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ವಿಜಯ ಕಾಂಚನ್ ಹಾಗೂ ಮಹಿಳೆಯರ ವಿಭಾಗದಲ್ಲಿ ಬೋಳ ಅಕ್ಷತಾ ಕುಮಾರಿ ಭಾಗವಹಿಸಲಿದ್ದಾರೆ.
ಇಂಡಿಯನ್ ಪವರ್‌ಲಿಫ್ಟಿಂಗ್ ಫೆಡರೇಶನ್‌ನಿಂದ ಆಯ್ಕೆಯಾಗಿರುವ ವಿಜಯ ಕಾಂಚನ್ 105 ಕೆಜಿ ವಿಭಾಗದಲ್ಲಿ ಹಾಗೂ ಅಕ್ಷತಾ ಪೂಜಾರಿ 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.