ಎಸ್ಸೆಸ್ಸೆಫ್ ನಿಂದ ಚೆಕ್ ವಿತರಣೆ
ಉಳ್ಳಾಲ, ನ.29 : ನಮ್ಮ ದೇಶದಲ್ಲಿ ಒಂದು ಒತ್ತಿನ ಅನ್ನಕ್ಕಾಗಿ ಬರಗಾಲವಿಲ್ಲ ಎಂಬ ರಾಜಕಾರಣಿಗಳ ಮಾತು ಸುಳ್ಳು . ದೇಶದಲ್ಲಿ ಬಿಡಿ ನಮ್ಮ ತಾಲೂಕಿನಲ್ಲಿ ಅದೆಷ್ಟೋ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿಯಿದೆ ಎಂದು ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಭಿಪ್ರಾಯಪಟ್ಟರು.
ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಮತ್ತು ಸಯ್ಯದ್ ಉಳ್ಳಾಲ ತಂಙಳ್ ಮೆಮೋರಿಯಲ್ ರಿಲೀಫ್ ಸರ್ವಿಸ್ ವತಿಯಿಂದ ಡಿ.2, 3 ರಂದು ಮಂಜನಾಡಿ ಅಲ್-ಮದೀನದಲ್ಲಿ ನಡೆಯುವ ಹುಬ್ಬುರ್ರಸೂಲ್ ಕಾರ್ಯಕ್ರಮದ ಪ್ರಚಾರಾರ್ಥ ಬಂಟ್ವಾಳದ ಬಡ ಕುಟುಂಬಕ್ಕೆ 20,000ರೂ. ಚೆಕ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ ಕಾರ್ಯಕ್ರಮ ಉದ್ಘಾಟಿಸಿದರು.
ಸುನ್ನಿ ಕಾರ್ಯಕರ್ತ ಅಬ್ದುಲ್ ನಾಸೀರ್ ಕಲ್ಕಟ್ಟ ಬಡ ಕುಟುಂಬಕ್ಕೆ ಚೆಕ್ ವಿತರಿಸಿದರು.
ಉದ್ಯಮಿ ಹಾಜಿ ಅಬ್ದುಲ್ ಖಾದರ್ ಸ್ವದೇಶಿ, ಸಮಾಜ ಸೇವಕ ಫಾರೂಕ್ ಮಂಚಿಲ, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಸದಸ್ಯ ಸಮೀರ್ ತೊಕ್ಕೊಟ್ಟು, ಎಸ್ಸೆಸ್ಸೆಫ್ ಮುಕ್ಕಚೇರಿ ಶಾಖೆ ಸದಸ್ಯ ಹನೀಫ್, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಕಾರ್ಯದರ್ಶಿ ಜುನೈದ್ ಪಟ್ಲ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್ ಸ್ವಾಗತಿಸಿದರು, ಕಾರ್ಯದರ್ಶಿ ಬಾತಿಷ್ ಮಂಚಿಲ ವಂದಿಸಿದರು.