×
Ad

ಅಪಘಾತಗಳ ನಿಯಂತ್ರಣ ಮತ್ತು ರಸ್ತೆ ಸಂಚಾರ ಸುರಕ್ಷತೆ : ಆಲ್ಕೋಬ್ರೆತ್ ಅನಾಲೈಜರ್ ಉಪಕರಣಗಳ ಹಸ್ತಾಂತರ

Update: 2016-11-29 21:00 IST

ಮಂಗಳೂರು, ನ.29: ಜಿಲ್ಲೆಯಲ್ಲಿ ಅಪಘಾತಗಳನ್ನು ನಿಯಂತ್ರಿಸಲು ಮತ್ತು ರಸ್ತೆ ಸಂಚಾರ ಸುರಕ್ಷತೆ ಕಾಪಾಡುವ ಸಲುವಾಗಿ ಟೋಟಲ್ ಆಯಿಲ್ ಇಂಡಿಯಾ ಪ್ರೈ.ಲಿ. ದ.ಕ.ಜಿಲ್ಲೆಗೆ 10 ‘ಆಲ್ಕೋಬ್ರೆತ್ ಅನಾಲೈಜರ್’ ಉಪಕರಣಗಳನ್ನು ಮಂಗಳವಾರ ದ.ಕ.ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿತು.

ದ.ಕ.ಜಿಲ್ಲಾ ಎಸ್ಪಿ ಭೂಷನ್ ಗುಲಾಬ್‌ರಾವ್ ಬೊರಸೆ ಈ ಉಪಕರಣಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರಲ್ಲದೆ, ರಾಷ್ಟ್ರೀಯ ಹೆದ್ದಾರಿಯ ಠಾಣೆಗಳಿಗೆ ವಿತರಿಸಿದರು.

ಮದ್ಯಪಾನ ಮಾಡಿ ವಾಹನಗಳನ್ನು ಚಾಲನೆ ಮಾಡುವವರ ವಿರುದ್ಧ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಟೋಟಲ್ ಆಯಿಲ್ ಇಂಡಿಯಾ ಪ್ರೈ.ಲಿ.ನ ಅಧಿಕಾರಿಗಳು ತರಬೇತಿ ನೀಡಿದರು.

ಈ ಸಂದರ್ಭ ಸಂಸ್ಥೆಯ ಅಧಿಕಾರಿಗಳಾದ ರಾಜೇಶ್, ರಮೇಶ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News