ಡಿ.2ರಿಂದ ಡಿಕೆಎಸ್ ಸಿ 20ನೇ ವಾರ್ಷಿಕ ಸಮ್ಮೆಳನ

Update: 2016-11-30 05:05 GMT

ಮಂಗಳೂರು,ನ.29: ಉಡುಪಿ ಮೂಳೂರಿನಲ್ಲಿರುವ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ನ 20ನೇ ವಾರ್ಷಿಕ ಮಹಾ ಸಮ್ಮೇಳನ ಡಿ.2ರಿಂದ 4ರ ತನಕ ಮೂಳೂರು ಅಲ್‌ ಇಹ್ಸಾನ್ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ.ಮಮ್ತಾಝ್ ಅಲಿ ತಿಳಿಸಿದ್ದಾರೆ.

20ನೇ ವಾರ್ಷಿಕೋತ್ಸವದ ಅಂಗವಾಗಿ ಸಮುದಾಯದ ಅಭಿವೃದ್ಧಿಗೆ ಪೂರಕವಾದ 20 ಅಂಶಗಳ ವಿವಿಧ ಕಾರ್ಯಕ್ರಮಗಳನ್ನು ಉಭಯ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರ ಸಮಾರೋಪ ಸಮಾರಂಭ ಇದಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

2ರಂದು ಉದ್ಘಾಟನೆ, 3 ಗಂಟೆಗೆ ಧ್ವಜಾರೋಹಣ, ಸಂಜೆ 4:30ಕ್ಕೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. 3ರಂದು ಬೆಳಗ್ಗೆ 10ಕ್ಕೆ ಜಮಾಅತ್ ಸಂಗಮ, ಜಲಾಲಿಯ್ಯ ದ್ಸಿಕ್ರ್ ಮಜ್ಲಿಸ್ ಜರಗಲಿದೆ. 4ರಂದು ಮುಸ್ಲಿಂ ಬಡಕುಟುಂಬದ 22 ಜೋಡಿಗಳ ಸಾಮೂಹಿಕ ವಿವಾಹ ಹಾಗೂ 30 ಬಡ ಕುಟುಂಬದ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು. ಸಂಜೆ 4.30ಕ್ಕೆ ಸಮಾರೋಪ ಮತ್ತು ಸನದುದಾನ ಸಮ್ಮೇಳನವಿದೆ. ಅಲ್‌ಇಹ್ಸಾನ್ ವಿಮೆನ್ಸ್ ಕಾಲೇಜಿನ ನೂತನ ಕಟ್ಟಡವನ್ನು ಈ ವೇಳೆ ಉದ್ಘಾಟಿಸಲಾಗುವುದು ಎಂದರು.

ಡಿಕೆಎಸ್‌ಸಿ ಕೇಂದ್ರ ಸಮಿತಿ ಪ್ರ.ಕಾರ್ಯದರ್ಶಿ ಇಸ್ಮಾಯೀಲ್ ಕಿನ್ಯ, ಸ್ವಾಗತ ಸಮಿತಿ ಸಂಚಾಲಕ ನಾಸಿರ್ ಲಕ್ಕಿ ಸ್ಟಾರ್, ಡಿಕೆಎಸ್‌ಸಿ ಪ್ರತಿನಿಧಿ ಹಾಕಿಂ ಕಂಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News