ಹಿಜಾಬ್‌ಧಾರಿಣಿ ಮುಖಕ್ಕೆ ಬಾಟಲಿ ಪೆಟ್ಟು
Update: 2016-11-29 21:30 IST
ಸ್ಯಾನ್‌ಫ್ರಾನ್ಸಿಸ್ಕೊ, ನ. 29: ಸೀಟಲ್‌ನ ವಾಶಿಂಗ್ಟನ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಹಿಜಾಬ್‌ಧಾರಿ 19 ವರ್ಷದ ಸೊಮಾಲಿ ಅಮೆರಿಕನ್ ವಿದ್ಯಾರ್ಥಿನಿಯ ಮುಖಕ್ಕೆ ದುಷ್ಕರ್ಮಿಯೊಬ್ಬ ಗಾಜಿನ ಬಾಟಲಿಯಿಂದ ಅಪ್ಪಳಿಸಿದ ಘಟನೆ ನಡೆದಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಶಿರವಸ್ತ್ರ ಧರಿಸುವ ಮಹಿಳೆಯರ ಮೇಲೆ ನಡೆಯುತ್ತಿರುವ ಆಕ್ರಮಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ನಸ್ರೊ ಹಸನ್ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಯ ಬಂಧನಕ್ಕೆ ನೆರವಾಗುವ ಮಾಹಿತಿ ನೀಡುವವರಿಗೆ 5,000 ಡಾಲರ್ ಬಹುಮಾನ ನೀಡುವುದಾಗಿ ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ ಹೇಳಿದೆ.
ನವೆಂಬರ್ 15ರಂದು ಘಟನೆ ನಡೆದಿದ್ದು, ವಿದ್ಯಾರ್ಥಿನಿಯ ಮುಖದಲ್ಲಿ ತರಚಿದ ಗಾಯಗಳಾಗಿವೆ.