ಮಂಗಳೂರು: ಕೈದಿಗಳಿಗೆ ಗಾಂಜಾ ಪೂರೈಕೆಗೆ ಯತ್ನ- ಮೂವರ ಸೆರೆ
Update: 2016-11-29 22:15 IST
ಮಂಗಳೂರು, ನ.29: ದ.ಕ.ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಯೊಬ್ಬನಿಗೆ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದ ಮೂವರನ್ನು ಬರ್ಕೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತೊಕ್ಕೊಟ್ಟು ಸಮೀಪದ ಕುತ್ತಾರ್ ನಿವಾಸಿಗಳಾದ ಸ್ಟೀವನ್, ಪ್ರಶಾಂತ್, ಸೂರಜ್ ಬಂಧಿತ ಆರೋಪಿಗಳು.
ಇವರು ಉಳ್ಳಾಲ ಠಾಣಾ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ ಕೈದಿಯೊಬ್ಬನಿಗೆ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಜೈಲು ಸಿಬ್ಬಂದಿ ವಶಕ್ಕೆ ಪಡೆದುಕೊಂಡು ಬರ್ಕೆ ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಕಾರ್ಯಾಚರಣೆ ನಡೆಸಿದ ಬರ್ಕೆ ಪೊಲೀಸರು ಆರೋಪಿಗಳನ್ನು ಬಂಧಿಸಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.