ವಿದುಷಿ ವಸಂತಿ ರಾಮ ಭಟ್ ರಿಗೆ ಅಭಿನಂದನೆ
Update: 2016-11-29 22:18 IST
ಉಡುಪಿ, ನ.29: ಉಡುಪಿ ರಾಗಧನ ವತಿಯಿಂದ ವಿದುಷಿ ವಸಂತಿ ರಾಮ ಭಟ್ ಅವರ ಹುಟ್ಟುಹಬ್ಬ, ಅಭಿನಂದನೆ ಹಾಗೂ ಸಂಗೀತ ಕಾರ್ಯ ಕ್ರಮವನ್ನು ಅಜ್ಜರಕಾಡು ಆರೂರು ಜಲಜಾಕ್ಷಮ್ಮ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಅಂಬಲಪಾಡಿ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಉದ್ಘಾಟಿಸಿರು. ಅಧ್ಯಕ್ಷತೆಯನ್ನು ಉಡುಪಿ ರಾಗಧನ ಅಧ್ಯಕ್ಷ ಎ.ಈಶ್ವರಯ್ಯ ವಹಿಸಿದ್ದರು.
ಅರವಿಂದ ಹೆಬ್ಬಾರ್ ಹಾಗೂ ಪ್ರತಿಭಾ ಎಂ.ಎಲ್.ಸಾಮಗ ಶುಭಾಶಂಸನೆ ಗೈದರು. ರಾಗಧನ ಕಾರ್ಯದರ್ಶಿ ಉಮಾಶಂಕರಿ ಟಿ.ಕೆ. ಸ್ವಾಗತಿಸಿದರು. ಕೋಶಾಧಿಕಾರಿ ಪ್ರೊ.ಕೆ.ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿ.ಎಸ್.ಗೋಕುಲ್ ಆಲಂಗೋಡು ಹಾಗೂ ಸಜಿನ್ ಲಾಲ್ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಿತು.