ಮರಳು ಬೆಲೆ ನಿಗದಿ
Update: 2016-11-29 22:32 IST
ಮಂಗಳೂರು, ನ.29: ದ.ಕ ಜಿಲ್ಲೆಯಲ್ಲಿ 30 ಕಿ.ಮೀ ಸುತ್ತಳತೆಯ ತಲುಪುದಾಣಕ್ಕೆ ಒಂದು ಲೋಡ್ ಸಾಮಾನ್ಯ ಮರುಳು (3 ಯುನಿಟ್)ಗೆ 5658 ರೂ. ವೌಲ್ಯವನ್ನು ನ.5ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರಗಿದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ನಿಗದಿಗೊಳಿಸಲಾಗಿದೆ.
ಜಿಲ್ಲಾಡಳಿತವು ನಿಗದಿಗೊಳಿಸಿರುವ ಬೆಲೆಗಿಂತ ಹೆಚ್ಚುವರಿಯಾಗಿ ಬೇಡಿಕೆ ಇಟ್ಟಲ್ಲಿ ಲಿಖಿತವಾಗಿ ಅಥವಾ ಶುಲ್ಕರಹಿತ ದೂರವಾಣಿ (1077)ಗೆ ದೂರು ಸಲ್ಲಿಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.