×
Ad

ಮಂಗಳೂರು: ವಸಾಹತು ಶಾಹಿಯ ನಂತರದ ಸಮಸ್ಯೆ,ವಿಷಯಗಳ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಗೋಷ್ಠಿ

Update: 2016-11-29 22:36 IST

ಮಂಗಳೂರು ,ನ.29:ಭಾರತದಲ್ಲಿ ವಸಾಹತು ಶಾಹಿಯ ನಂತರದ ಸಾಹಿತ್ಯ ರಚನೆಗಳನ್ನು ಅಧ್ಯಯನ ಗಳನ್ನು ಮಾಡಿದಾಗ ಭಾರತದ ಪ್ರಾದೇಶಿಕ ಭಾಷೆ, ಬಹುತ್ವ ವನ್ನು ನಿರ್ಲಕ್ಷಿಸಿರುವುದು ಕಂಡು ಬರುತ್ತದೆ ಎಂದು ಗುಜರಾತ್‌ನ ಸೆಂಟ್ರಲ್ ವಿಶ್ವ ವಿದ್ಯಾನಿಲಯದ ಪ್ರೊಫೆಸರ್ ಡಾ.ಇ.ವಿ.ರಾಮಕೃಷ್ಣ ನ್ ತಿಳಿಸಿದ್ದಾರೆ.
                ಮಂಗಳೂರು ವಿಶ್ವ ವಿದ್ಯಾನಿಲಯದ ಹಳೆ ಸೆನೆಟ್ ಸಭಾಂಗಣದಲ್ಲಿ ಆಂಗ್ಲಭಾಷಾ ಅಧ್ಯಯನ ವಿಭಾಗದ ವತಿಯಿಂದ ಇಂದು ಚಾಲನೆಗೊಂಡ ವಸಾಹತು ಶಾಹಿಯ ನಂತರದ ಸಮಸ್ಯೆ,ವಿಷಯಗಳ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಗೋಷ್ಠಿಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
    ವಸಾಹತು ಶಾಹಿಯ ನಂತರದ ದಿನಗಳಲ್ಲಿ ಇಲ್ಲಿನ ಬರವಣಿಗೆ,ಭಾಷೆ ,ಕೃತಿಗಳ ವಿಚಾರಗಳನ್ನು ಗಮನಿಸಿದಾಗ ಪಾಶ್ಚಿಮಾತ್ಯ ಭಾಷೆ ಗಳ ಪ್ರಭಾವದೊಂದಿಗೆ ಸ್ಥಳೀಯವಾದ ಭಾಷೆ ಹಾಗೂ ಆ ಕಾಲದಲ್ಲಿ ಭಾರತದ ಜನರು ವಿದೇಶದ ಜನರೊಂದಿಗೆ ವ್ಯವಹಾರಕ್ಕೆ ಬಳಸುತ್ತಿದ್ದ ಪರ್ಷಿಯ,ಅರೆಬಿ ಭಾಷೆಯ ಬದಲಾಗಿ ಆಂಗ್ಲ ಭಾಷೆಗೆ ಹೆಚ್ಚಿನ ಮನ್ನಣೆ ನೀಡಲಾಯಿತು.ಜೊತೆಗೆ ಇಲ್ಲಿನ ಸಮಾಜ ವಿಜ್ಞಾನ ಅಧ್ಯಯನಗಳಲ್ಲಿ ಸ್ಥಳೀಯ ಸಂಸ್ಕ್ಕೃತಿಯನ್ನು ಪರಿಗಣಿಸದೆ ಕೃತಿ ರಚನೆ ಮಾಡಿರುವುದು ಕಂಡು ಬಂದಿದೆ ಎಂದು ರಾಮಕೃಷ್ಣನ್ ತಿಳಿಸಿದ್ದಾರೆ.
 ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿದ ಸ್ವಿಝರ್ ಲ್ಯಾಂಡ್‌ನ ಬಸೆಲ್ ವಿಶ್ವ ವಿದ್ಯಾನಿಲಯದ ಸಂಶೋಧಕ ಡಾ.ಪೌಲ್ ಜೆನ್‌ಕಿನ್ ಮಾತನಾಡುತ್ತಾ ವಸಾಹತು ಶಾಹಿ ದಕ್ಷಿಣ ಆಫ್ರಿಕಾದಲ್ಲಿ ವರ್ಣ ದ ಆಧಾರದಲ್ಲಿ ಸಮಾಜದಲ್ಲಿ ಮೇಲು ಕೀಳು ಎಂಬ ಸ್ತರಗಳನ್ನು ನಿರ್ಮಿಸಿತು ಎಂದು ತಿಳಿಸಿದರು.
 ಸಮಾವೇಶದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಕೆ.ಭೈರಪ್ಪ ಮಾತನಾಡುತ್ತಾ ಸಾಹಿತ್ಯ ಕೇವಲ ಕಥೆಗಳನ್ನು ಹೇಳುವುದಕ್ಕೆ ಸೀಮಿತವಾಗಿಲ್ಲ ;ಅದು ಬದುಕಿನ ದೈನಂದಿನ ಆಗು ಹೋಗುಗಳನ್ನು ದಾಖಲಿಸುತ್ತದೆ.ಅಫ್ರಿಕಾ ಖಂಡದ ಸಾಕಷ್ಟು ಸಾಹಿತಿಗಳು ಜಗತ್ತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಆಂಗ್ಲ ಭಾಷಾ ವಿಭಾಗದ ಅಧ್ಯಕ್ಷೆ ಪ್ರೊ.ಪರಿಣಿತ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News