ಕೊಂಕಣಿ ಪುಸ್ತಕ ಬಿಡುಗಡೆ
Update: 2016-11-29 22:40 IST
ಮಂಗಳೂರು, ನ.29: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಕಟಿಸಿದ ‘500 ಖೆಳ್’ ಕೃತಿಯನ್ನು ಡಿ.2ರಂದು ಜೆಪ್ಪುವಿನಲ್ಲಿ ‘ಸೆಮಿನರಿ ದಿವಸ’ದಂದು ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಬಿಡುಗಡೆಗೊಳಿಸಲಿದ್ದಾರೆ.
ಶಿಬಿರ, ಕಾರ್ಯಾಗಾರ ಹಾಗೂ ವಿವಿಧ ಸಮಾರಂಭಗಳಲ್ಲಿ ಉಪಯೋಗಿಸಲು ಅನುವಾಗುವಂತೆ 500 ಆಟಗಳನ್ನು ಜೆಪ್ಪುಗುರುಮಠದ ಆರು ಮಂದಿ ಸಹೋದರರಾದ ಬ್ರದರ್ ಫ್ಲಾಯನ್ ಲೋಬೊ, ಬಂಟ್ವಾಳ್, ರೋಹನ್ ಡಾಯಸ್ ತಾಕೊಡೆ, ತ್ರಿಶಾನ್ ಡಿಸೋಜ ಪೆರ್ಮನ್ನೂರ್, ಅಶ್ವಿನ್ ಕ್ರಾಸ್ತಾ ಕುಂಬ್ಳೆ, ಅಶ್ವಿನ್ ಆರಾನ್ಹಾ ಕಣಜಾರ್ ಮತ್ತು ರೂಪೇ ತಾವ್ರೊ ಅಲ್ಲಿಪಾದೆ ಸಂಗ್ರಹಿಸಿದ್ದಾರೆ.