ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ಶಿಷ್ಯೋಪನಯ, ಧನ್ವಂತರಿ ಪೂಜೆ
Update: 2016-11-29 23:04 IST
ಮೂಡುಬಿದಿರೆ, ನ.29: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಆವರಣದಲ್ಲಿ ಆಳ್ವಾಸ್ ಧನ್ವಂತರಿಪೂಜಾ ಮಹೋತ್ಸವ ಸಂಪನ್ನಗೊಂಡಿತು.
ಸಂಕಲ್ಪ ಸಹಿತ ಪ್ರಾರಂಭಗೊಂಡ ಧನ್ವಂತರಿ ಅರ್ಚನೆ, ಪೂಜೆ ಮತ್ತು ಹೋಮ ಆಯುರ್ವೇದದ ಸ್ನಾತಕ- ಸ್ನಾತಕೋತ್ತರ ವಿದ್ಯಾರ್ಥಿಗಳ ಭಜನಾ ಕಾರ್ಯಕ್ರಮದೊಂದಿಗೆ ನೆರವೇರಿತು. ಧನ್ವಂತರಿ ಸ್ತೋತ್ರ, ಅಶ್ವಿನಿ ಸೂಕ್ತದ ಪಠಣ ನಡೆಯಿತು.
ವೇ.ಮೂ.ಅಲಂಗಾರು ಸುಬ್ರಹ್ಮಣ್ಯ ಭಟ್ ಮತ್ತು ಬಳಗದದವರು ಧನ್ವಂತರಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಸ್ನಾತಕ ಮತ್ತು ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿಗಳು ಶಾಸ್ತ್ರೋಕ್ತ ಆಯುರ್ವೇದ ವಿದ್ಯಾರಂಭವನ್ನು ಮಾಡುವುದಕ್ಕೆ ಶಿಷ್ಯೋಪನಯನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಟ್ರಷ್ಟಿ ಡಾ.ವಿನಯ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿನಯಚಂದ್ರ ಶೆಟ್ಟಿ ಉಪಸ್ಥಿತರಿದ್ದರು.