‘ಕೇವಲ ನಾಲ್ವರು ಭಯೋತ್ಪಾದಕರು’
Update: 2016-11-30 00:04 IST
ಹೊಸದಿಲ್ಲಿ, ನ.29: ಪಠಾಣ್‌ಕೋಟ್ ವಾಯುನೆಲೆಯಲ್ಲಿ 8 ಮಂದಿ ಯೋಧರು ಹುತಾತ್ಮರಾದ ದಾಳಿಯನ್ನು ನಾಲ್ವರು ಭಯೋತ್ಪಾದಕರು ನಡೆಸಿದ್ದರೆಂದು ಸರಕಾರವಿಂದು ಸ್ಪಷ್ಟಪಡಿಸಿದೆ. ಈ ಮೂಲಕ ಅದು ವಾಯುನೆಲೆ ಪ್ರವೇಶಿಸಿದ್ದ ಭಯೋತ್ಪಾದಕರ ಸಂಖ್ಯೆಯ ಕುರಿತಾದ ಊಹಾಪೋಹಗಳಿಗೆ ತೆರೆಯೆಳೆದಿದೆ.
ಜ.2ರ ದಾಳಿಯನ್ನು ಪಾಕಿಸ್ತಾನ ಮೂಲದ ನಾಲ್ವರು ಭಯೋತ್ಪಾದಕರು ನಡೆಸಿದ್ದರೆಂದು ಕೇಂದ್ರ ಗೃಹ ಸಹಾಯಕ ಸಚಿವ ಹಂಸರಾಜ್ ಗಂಗಾರಾಮ್ ಆಹಿರ್ ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ರವ್ನೀಸ್ ಸಿಂಗ್‌ರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ನಾಲ್ವರು ಪಾಕಿಸ್ತಾನ ಮೂಲದ ಭಯೋತ್ಪಾದಕರು ಅಕಲ್‌ಗಡದ ಗುಲ್ಪುರ್ ಸಿಮ್ಲಿ ಗ್ರಾಮದ ರಾವಿ ನದಿಯ ಸೇತುವೆಯ ಬಳಿಯ ಧುಸಿ ತಿರುವಿನಲ್ಲಿ ಜನಿಯಾಲ್ ರಸ್ತೆಯ ಮೂಲಕ ಪಂಜಾಬನ್ನು ಪ್ರವೇಶಿಸಿ, ಪಠಾಣ್‌ಕೋಟ್ ವಾಯುದಳದ ನೆಲೆಯ ಮೇಲೆ ದಾಳಿ ನಡೆಸಿದ್ದರೆಂದು ತಿಳಿಸಿದ್ದಾರೆ.