ಜನಧನ್ ಖಾತೆಯಿಂದ ತಿಂಗಳಿಗೆ 10 ಸಾವಿರ ರೂ. ಹಿಂಪಡೆಯಲು ಅವಕಾಶ
Update: 2016-11-30 10:14 IST
ಹೊಸದಿಲ್ಲಿ, ನ.30: ಜನಧನ್ ಖಾತೆಗೆ ಜಮೆ ಮಾಡಲಾದ ಠೇವಣಿಯಿಂದ ಠೇವಣಿದಾರರಿಗೆ ತಿಂಗಳಿಗೆ ಹತ್ತು ಸಾವಿರ ರೂ. ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಮಿತಿ ಅವಕಾಶ ಕಲ್ಪಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಈ ಆದೇಶ ಹೊರಡಿಸಿದೆ. ರೈತರ ಮತ್ತು ಗ್ರಾಮೀಣ ಜನಧನ್ ಖಾತೆ ಹೊಂದಿರುವವರ ಹಿತ ಕಾಯಲು ಮುಂದಾಗಿರುವ ಆರ‍್ ಬಿಐ ಇದೀಗ ಹೊಸ ಆದೇಶ ಹೊಡಿಸಿದೆ. ಜನ ಧನ್ ಖಾತೆಯನ್ನು ಕಾಳಧನಿಕರು ದುರ್ಬಳಕೆ ಮಾಡುವ ಪ್ರಯತ್ನವನ್ನು ವಿಫಲಗೊಳಿಸಲು ಆರ‍್ ಬಿಐ ಹೆಜ್ಜೆ ಇರಿಸಿದೆ.
ಜನಧನ್ ಖಾತೆಯಲ್ಲಿ ಹಣ ಜಮೆ ಮಾಡಿದವರು ಪ್ರತಿತಿಂಗಳು ಹತ್ತು ಸಾವಿರ ರೂ. ಹಿಂಪಡೆಯುವ ಮೊದಲು ಹಣದ ಆವಶ್ಯಕತೆಯ ಬಗ್ಗೆ ಸೂಕ್ತ ಕಾರಣವನ್ನು ಬ್ಯಾಂಕ್ ಮ್ಯಾನೇಜರ್‌ಗೆ ನೀಡಬೇಕಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.