×
Ad

ಹೊಸ ನೋಟಿನಲ್ಲಿ ವರದಕ್ಷಿಣೆ ನೀಡಲು ವಿಫಲ

Update: 2016-11-30 11:02 IST

ಹೊಸದಾಗಿ ಮದುವೆಯಾದ ಹುಡುಗಿಯನ್ನು ಆಕೆಯ ಅತ್ತೆ ಮನೆಯವರೇ ಕೊಲೆ ಮಾಡಿರುವ ಆಘಾತಕಾರಿ ಸುದ್ದಿ ಒಡಿಶಾ ಗಂಜಂ ಜಿಲ್ಲೆಯಿಂದ ವರದಿಯಾಗಿದೆ. ಯುವತಿಯ ತಂದೆ ವರದಕ್ಷಿಣೆಯಾಗಿ ರೂ. 1.70 ಲಕ್ಷವನ್ನು ಹೊಸ ಕರೆನ್ಸಿ ನೋಟುಗಳಾದ ರು. 500 ಮತ್ತು ರು. 2000ದಲ್ಲಿ ಕೊಡಲು ವಿಫಲವಾಗಿರುವುದು ಇದಕ್ಕೆ ಕಾರಣ ಎಂದು ಒಡಿಶಾ ಪೊಲೀಸರು ಹೇಳಿದ್ದಾರೆ. ಈ ಅಪರಾಧ ಗಂಜಂ ಜಿಲ್ಲೆಯ ರಂಗಿಪುರ್ ಎನ್ನುವ ಗ್ರಾಮದಲ್ಲಿ ನಡೆದಿದೆ.

ರು. 500 ಮತ್ತು ರು. 1000 ನೋಟುಗಳನ್ನು ರದ್ದು ಮಾಡಿದ ಮರುದಿನ ನವೆಂಬರ್ 9ರಂದು ಪ್ರಭಾತಿ ಎನ್ನುವ ಯುವತಿ ತನ್ನದೇ ಗ್ರಾಮದ ಲಕ್ಷ್ಮೀ ನಾಯಕ್ ಎನ್ನುವ ಯುವಕನನ್ನು ಮದುವೆಯಾಗಿದ್ದಳು. ಮದುವೆಯ ದಿನವೇ ವರದಕ್ಷಿಣೆಯ ರೂಪದಲ್ಲಿ ನಗದನ್ನು ಕೊಡುವುದಾಗಿ ಯುವತಿಯ ಕುಟುಂಬ ಒಪ್ಪಿಕೊಂಡಿತ್ತು. ಆದರೆ ಯುವತಿಯ ತಂದೆ ಆಕಸ್ಮಿಕವಾಗಿ ನೋಟು ರದ್ದತಿಯನ್ನು ಘೋಷಿಸಿರುವ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ಅವರು ರು. 1.70 ಲಕ್ಷವನ್ನು ಹಳೇ ನೋಟುಗಳಲ್ಲಿ ಕೊಟ್ಟಾಗ ನಗದನ್ನು ಸ್ವೀಕರಿಸಲು ವರನ ಕಡೆಯವರು ನಿರಾಕರಿಸಿದ್ದರು. ಬದಲಾಗಿ ನಿರ್ದಿಷ್ಟ ಸಮಯದೊಳಗೆ ಹೊಸ ನೋಟುಗಳಲ್ಲಿ ವರದಕ್ಷಿಣೆ ಕೊಡಬೇಕು ಎಂದು ಕೇಳಿದ್ದರು. ಆದರೆ ಹೊಸ ನೋಟುಗಳಲ್ಲಿ ವರದಕ್ಷಿಣೆ ಕೊಡಲು ಕುಟುಂಬವು ವಿಫಲವಾದ ಕಾರಣ ಪ್ರಭಾತಿಯನ್ನು ಪತಿಯ ಮನೆಯವರು ಕೊಂದಿದ್ದಾರೆ ಎಂದು ಆಕೆಯ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ. "ನಾವು ಹೊಸ ನೋಟುಗಳನ್ನು ಕೊಡಲಿಲ್ಲ ಎನ್ನುವ ಒಂದೇ ಕಾರಣದಿಂದ ಲಕ್ಷ್ಮೀ ನಾಯಕ್ ಮತ್ತು ಆತನ ಕುಟುಂಬ ನಮ್ಮ ಮಗಳನ್ನು ಕೊಂದಿದ್ದಾರೆ. ಅವರಿಗೆ ಶಿಕ್ಷೆಯಾಗಬೇಕು" ಎಂದು ಪ್ರಭಾತಿಯ ತಾಯಿ ಕುನು ಮಂಡಲ್ ಹೇಳಿದ್ದಾರೆ. ಗೋಳಂಥರಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕೊಲೆ ಮೊಕದ್ದಮೆಯನ್ನು ದಾಖಲಿಸಲಾಗಿದೆ.

ಕೃಪೆ: www.financialexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News