ಎರಡು ಹಸುಳೆಗಳ ಅಸ್ಥಿಪಂಜರ ಪತ್ತೆ !
ಕೊಲ್ಕತ್ತಾ,ನ.30 : ರಾಜ್ಯದ ಹಲವೆಡೆ ಹಿರಿಯ ನಾಗರಿಕರ ಹಾಗೂ ಮಾನಸಿಕ ಅಸ್ವಸ್ಥರ ಆಶ್ರಯತಾಣಗಳಿಗೆ ಪಶ್ಚಿಮ ಬಂಗಾಳ ಪೊಲೀಸರು ನಡೆಸಿದದಾಳಿಗಳಲ್ಲಿ 13 ಶಿಶುಗಳನ್ನು ರಕ್ಷಿಸಿದರೆಎರಡು ಹಸುಳೆಗಳ ಅಸ್ಥಿಪಂಜರ ಪತ್ತೆಯಾಗಿದೆ.ಶಂಕಿತ ಅಂತಾರಾಷ್ಟ್ರೀಯಮಾನವ ಕಳ್ಳಸಾಗಣೆ ಜಾಲದ ತನಿಖೆ ಸಂಬಂಧ ಈ ದಾಳಿಗಳು ನಡೆದಿವೆ.
ರಕ್ಷಿಸಲ್ಪಟ್ಟ 10 ಹಸುಳೆಗಳಲ್ಲಿ ಎಲ್ಲವೂ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಾಗಿದ್ದು ಇವುಗಳನ್ನುಬಡತನ ಪೀಡಿತ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿತ್ತು.
ನೆರೆಯ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ಎರಡು ಶಿಶುಗಳ ಅಸ್ಥಿಪಂಜರಗಳು ದತ್ತು ಕೇಂದ್ರವನ್ನು ನಡೆಸುತ್ತಿರುವ ಚ್ಯಾರಿಟಿ ಸಂಸ್ಥೆಯಲ್ಲಿ ಪತ್ತೆಯಾಗಿದೆ.
ನರ್ಸಿಂಗ್ ಹೋಮ್ ಒಂದರ ಸ್ಟೋರ್ ರೂಮ್ ಒಂದರಲ್ಲಿ ರಟ್ಟಿನ ಬಿಸ್ಕಿಟ್ ಬಾಕ್ಸ್ ಗಳಲ್ಲಿಮೂರು ನವಜಾತ ಶಿಶುಗಳು ಇತ್ತೀಚೆಗೆ ಪತ್ತೆಯಾದ ನಂತರ ಈ ದಾಳಿ ನಡೆದಿವೆ.
ನವಜಾತ ಶಿಶುಗಳ ಕಳ್ಳಸಾಗಣೆ ಆರೋಪದಲ್ಲಿ 18 ಮಂದಿಯನ್ನು ಇಲ್ಲಿಯ ತನಕ ಬಂಧಿಸಲಾಗಿದೆಯೆಂದು ಪಶ್ಚಿಮ ಬಂಗಾಳದ ಸಿಐಡಿ ಹೆಚ್ಚುವರಿ ಅಧಿಕಾರಿ ಮಹಾನಿರ್ದೇಶಕ ರಾಜೇಶ್ ಕುಮಾರ್ ಹೇಳಿದ್ದಾರೆ. ಈ ಮಕ್ಕಳನ್ನು ಭಾರತ ಹಾಗೂ ವಿದೇಶಗಳಲ್ಲಿ ದತ್ತು ಪಡೆಯುವವರಿಗೆ ನೀಡಲಾಗುತ್ತಿತ್ತು ಎಂದು ಶಂಕಿಸಲಾಗಿದೆ. ಎನ್ ಜಿ ಓಗಳು, ನರ್ಸಿಂಗ್ ಹೋಮ್ ಗಳು, ವೈದ್ಯರು ಹಾಗೂ ದಳ್ಳಾಳಿಗಳಿರುವ ದೊಡ್ಡ ಜಾಲವಿದು, ಎಂದು ಅವರು ತಿಳಿಸಿದ್ದಾರೆ.
ಅವಿವಾಹಿತ ಗರ್ಭಿಣಿಯರು ಕೆಲವೊಮ್ಮೆ ಕೆಲವು ಕ್ಲಿನಿಕ್ಕುಗಳಿಗೆ ಅಬಾರ್ಷನ್ ಗಾಗಿ ಭೇಟಿ ನೀಡಿದರೆ, ಅವರಿಗೆ ಮಗು ಹೆರುವಂತೆ ಹಾಗೂ ನಂತರ ಅದನ್ನು ಮಾರುವಂತೆ ಒತ್ತಾಯಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಹೆರಿಗೆಯಾದ ಕೆಲವು ಮಹಿಳೆಯರ ಶಿಶುಗಳು ಜೀವಂತವಾಗಿದ್ದರೂ ಅವರ ಮಗು ಸತ್ತಿದೆ ಎಂದು ಬೇರೆ ನವಜಾತಶಿಶುಗಳನ್ನು ಅವರಿಗೆ ತೋರಿಸಿ ನಂಬಿಸಿ ಅವರ ಮಕ್ಕಳನ್ನು ಮಾರಾಟ ಮಾಡಲಾಗುತ್ತಿತ್ತೆನ್ನಲಾಗಿದೆ. ನಂತರ ಆ ಶಿಶುಗಳನ್ನು ಬಿಸ್ಕಿಟ್ ಬಾಕ್ಸ್ ಗಳಲ್ಲಿ ದತ್ತು ಕೇಂದ್ರಗಳಿಗೆ ಸಾಗಿಸಲಾಗುತ್ತಿತ್ತೆಂದು ಮೂಲಗಳು ತಿಳಿಸಿವೆ.