ಡಿಸೆಂಬರ್ 10 , 11 : ಬೆಂಗಳೂರಿನಲ್ಲಿ ಕೋಡಿಂಗ್ ಉತ್ಸಾಹಿಗಳಿಗಾಗಿ ಪ್ರಜ್ಞಾನ್ ಹ್ಯಾಕಥಾನ್-2016

Update: 2016-11-30 06:47 GMT

ಮಂಗಳೂರು: ಪ್ರಜ್ಞಾನ್ ಹಾಗೂ ವೆಸ್ಟರ್ನ್ ಡಿಜಿಟಲ್ ಸಂಯುಕ್ತ ಆಶ್ರಯದಲ್ಲಿ ಕೋಡಿಂಗ್ ಉತ್ಸಾಹಿಗಳಿಗಾಗಿ ಪ್ರಜ್ಞಾನ್ ಹ್ಯಾಕಥಾನ್-2016 ಎಂಬ ವಿಶಿಷ್ಟ ಸ್ಪರ್ಧೆ ಆಯೋಜಿಸಿದೆ.

ವಿದ್ಯಾರ್ಥಿಗಳು, ಹವ್ಯಾಸಿಗಳು, ಸ್ಟಾರ್ಟ್ ಅಪ್  ಹಾಗೂ ಹ್ಯಾಕಿಂಗ್ ಉತ್ಸಾಹಿಗಳಿಗೆ ಈ ಸ್ಪರ್ಧೆ ಮುಕ್ತವಾಗಿದ್ದು, ಗರಿಷ್ಠ ಮೂರು ಮಂದಿಯ ತಂಡಗಳಲ್ಲಿ ಭಾಗವಹಿಸಲು ಅವಕಾಶವಿದೆ. ಬೆಂಗಳೂರಿನ ಡಿಇಆರ್‌ಬಿಐ ಫೌಂಡೇಷನ್ ಆವರಣದಲ್ಲಿ ಡಿಸೆಂಬರ್ 10 ಹಾಗೂ 11ರಂದು ಈ ಸ್ಪರ್ಧೆ ನಡೆಯಲಿದೆ.

ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ 1.25 ಲಕ್ಷ ರೂಪಾಯಿವರೆಗಿನ ಇಂಟರ್ನ್‌ಶಿಪ್ ದೊರಕಲಿದೆ. ಈ ಮೂರನೇ ವರ್ಷದ ಸ್ಪರ್ಧೆಯಲ್ಲಿ ಪ್ರಜ್ಞಾನ್ ಹ್ಯಾಕಥಾನ್ ಎಲ್ಲ ಚಿಂತಕರನ್ನು ಒಂದೆಡೆ ಸೇರಿಸಿ, ತಮ್ಮ ಯೋಚನೆಗಳನ್ನು ವಿಶಿಷ್ಟ ಅಪ್ಲಿಕೇಶನ್‌ಗಳಾಗಿ ಪ್ರವಾಸ, ಹೆಲ್ತ್‌ಕೇರ್, ಚಿಲ್ಲರೆ ಮಾರಾಟ, ಸಮಾಜ ಕಲ್ಯಾಣ ಅಥವಾ ರಕ್ಷಣಾ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಪ್ರಯತ್ನಕ್ಕೆ ವೇದಿಕೆ ಕಲ್ಪಿಸಲಿದೆ.

ಈ ಸ್ಪರ್ಧೆಗೆ ನೋಂದಣಿ ಗವಾಕ್ಷಿ ಆರಂಭವಾಗಿದ್ದು, ಡಿಸೆಂಬರ್ 6ರವರೆಗೆ ತೆರೆದಿರುತ್ತದೆ. ನೋಂದಣಿ ಲಿಂಕ್, ನಿಯಮಾವಳಿಗಳು, ತೀರ್ಪುಗಾರರ ಮಾನದಂಡಗಳು, ಸಂಪರ್ಕ ವಿಳಾಸ ಮತ್ತಿತರ ವಿವರಗಳನ್ನು ಹ್ಯಾಕಥಾನ್ ವೆಬ್‌ಪೇಜ್ pragyan.org/hackathon.  ನಿಂದ ಪಡೆಯಬಹುದಾಗಿದೆ. ಹೊಸ ಬೆಳವಣಿಗೆಗಳನ್ನು ನಿಯಮಿತವಾಗಿ ಈ ಸ್ಪರ್ಧೆಗಾಗಿ ಸಿದ್ಧಪಡಿಸಿದ ಫೇಸ್‌ಬುಕ್ ಪೇಜ್‌ನಲ್ಲಿ ಮತ್ತು ಪ್ರಜ್ಞಾನ್ ಫೇಸ್‌ಬುಕ್ ಹ್ಯಾಂಡಲ್ fb.me/pragyan.nitt ನಲ್ಲಿ ಪೋಸ್ಟ್ ಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News