ಹಣವಿಲ್ಲದ ಬ್ಯಾಂಕ್ ಗಳನ್ನು ಬಂದ್ ಮಾಡಿದ ಜನತೆ
ಕ್ಯಾಲಿಕಟ್,ನವೆಂಬರ್ 30: ಹಣ ಲಭಿಸದಿರುವುದರಿಂದ ಬೇಸತ್ತ ಜನರು ಕ್ಯಾಲಿಕಟ್ ಜಿಲ್ಲೆಯಲ್ಲಿ ಎರಡು ಬ್ಯಾಂಕ್ ಶಾಖೆಗಳನ್ನು ಜನರೇ ಬಂದ್ ಮಾಡಿದ ಘಟನೆ ವರದಿಯಾಗಿದೆ. ಗ್ರಾಮೀಣ ಬ್ಯಾಂಕ್‌ನ ವಿಲಂಙಾಡ್ ಶಾಖೆ, ಸಿಂಡಿಕೇಟ್ ಬ್ಯಾಂಕ್‌ನ ಪೆರಂಬ್ರ ಶಾಖೆಗಳಿಗೆ ಕೋಪಗೊಂಡ ಜನಸಂದಣಿ ಬಾಗಿಲು ಹಾಕಿದೆ. ಇಂತಹ ಒಂದು ಘಟನೆ ಮಂಗಳವಾರ ಬೆಳಗ್ಗೆ 10:15ಕ್ಕೆ ಪರೆಂಬ್ರದ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ನಡೆದಿದೆ. ಕಳೆದ ಶುಕ್ರವಾರ ಬ್ಯಾಂಕ್‌ಗೆ ಬಂದು ಖಾತೆಯಿಂದ ಹಣ ತೆಗೆಯಲು ಬಯಸಿದ ಜನರಿಗೆ ಸೋಮವಾರ ಹಣ ಡ್ರಾ ಮಾಡಬಹುದು ಎಂದು ಬ್ಯಾಂಕ್ ಅಧಿಕಾರಿಗಳು ಟೋಕನ್ ನೀಡಿದ್ದರು. ಆದರೆ ಸೋಮವಾರವೂ ಬ್ಯಾಂಕ್‌ಗೆ ಹಣ ಬಂದಿರಲಿಲ್ಲ. ಆದ್ದರಿಂದ ಬ್ಯಾಂಕ್ ಅಧಿಕಾರಿಗಳು ಮರುದಿನ ಅಂದರೆ ಮಂಗಳವಾರ ಬರುವಂತೆ ಖಾತೆದಾರರಿಗೆ ಸೂಚಿಸಿದ್ದರು. ಮಂಗಳವಾರ ಬೆಳಗ್ಗೆ ನೂರಾರು ಮಂದಿ ಬ್ಯಾಂಕಿಗೆ ಬಂದಾಗಲೂ ಅಲ್ಲಿಗೆ ಹಣ ಬಂದಿರಲಿಲ್ಲ. ಹಿಂದಿನದೆ ರಾಗ ಬ್ಯಾಂಕ್ ಅಧಿಕಾರಿಗಳು ಪುನರುಚ್ಚರಿಸಿದ್ದಾರೆ ಮಾತ್ರವಲ್ಲ ಬ್ಯಾಂಕಿಗೆ ಯಾವಾಗ ಹಣ ಬರುತ್ತದೆ ಎಂದು ತಿಳಿಸಲು ಬ್ಯಾಂಕ್ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಕೋಪಗೊಂಡ ಜನರು ಬ್ಯಾಂಕ್ ಉದ್ಯೋಗಿಗಳನ್ನು ಬ್ಯಾಂಕಿನೊಳಗೆ ಹಾಕಿ ಬಾಗಿಲ ಮುಂದಿನ ಗ್ರಿಲ್‌ಗಳನ್ನು ಎಳೆದು ಬ್ಯಾಂಕ್ ಮುಚ್ಚಿದ್ದಾರೆ. ಪೆರಂಬ್ರ ಎಸ್ಸೈ ಸುರೇಂದ್ರನ್‌ರ ನೇತೃತ್ವದ ಪೊಲೀಸರ ತಂಡ ಕೋಪಗೊಂಡಿದ್ದ ಜನರನ್ನು ಸಮಾಧಾನಿಸಿದ ಬಳಿಕ ವಿವಾದ ಸುಖಾಂತ್ಯವಾಗಿತ್ತು. ಬ್ಯಾಂಕ್‌ನಲ್ಲಿ ಹಣ ಖಾಲಿಯಾದ್ದರಿಂದ ತಾವೇನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ ಗ್ರಾಮೀಣ ಬ್ಯಾಂಕ್‌ನ ಶಾಖೆಯಲ್ಲಿ ಕೂಡಾ ಮಂಗಳವಾರ ಬೆಳಗ್ಗೆ ಬ್ಯಾಂಕ್‌ಗೆ ಬಂದ ಮ್ಯಾನೇಜರ್ ಮತ್ತು ಉದ್ಯೋಗಿಗಳನ್ನು ಕೊಪಗೊಂಡ ಜನರು ಬ್ಯಾಂಕಿನೊಳಗೆ ಹಾಕಿ ಬಾಗಿಲು ಮುಚ್ಚಿದ್ದರು. ನಂತರ ರಾಜಕಾರಣಿಗಳು, ಪಂಚಾಯತ್ ಅಧ್ಯಕ್ಷರು ಮತ್ತುಪೊಲೀಸರು ಕುಪಿತ ಜನರನ್ನು ಸಮಾಧಾನ ಪಡಿಸಿದರೆಂದುವರದಿ ತಿಳಿಸಿದೆ.