ವಿಮಾನದ ತುರ್ತು ಬಾಗಿಲು ತೆರೆದು ಹಾರಿದ ಮಹಿಳೆ

Update: 2016-11-30 07:37 GMT

ಯುನೈಟೆಡ್ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತುರ್ತು ಬಾಗಿಲನ್ನು ತೆಗೆದು ವಿಮಾನದಿಂದ ಜಿಗಿದಿದ್ದಾರೆ. ಅಮೆರಿಕದ ಹೌಸ್ಟನ್‌ನ ಬುಷ್ ಇಂಟರ್‌ಕಾಂಟಿನೆಂಟಲ್ ವಿಮಾನ ನಿಲ್ದಾಣದಲ್ಲಿ ವಿಮಾನ ರನ್‌ವೇನಲ್ಲಿ ವೇಗ ಪಡೆದುಕೊಳ್ಳುತ್ತಿದ್ದಾಗ ನಿಗೂಢವಾಗಿ ಮಹಿಳೆ ಹೀಗೆ ಹಾರಿದ್ದಾಳೆ.

ಮಧ್ಯಾಹ್ನದ ಸಮಯದಲ್ಲಿ ನ್ಯೂ ಆರ್ಲಿಯನ್ಸ್‌ನಿಂದ ಹೌಸ್ಟನ್‌ಗೆ ಹೋಗುತ್ತಿದ್ದ 1892 ವಿಮಾನದಲ್ಲಿ ಕೂತಿದ್ದ ಮಹಿಳೆ ವಿಮಾನ ನಿಲ್ದಾಣದಲ್ಲಿ ವಿಮಾನ ರನ್‌ವೇನಲ್ಲಿ ವೇಗಪಡೆದುಕೊಳ್ಳುತ್ತಿದ್ದಾಗ ಆಕಸ್ಮಿಕವಾಗಿ ರೆಕ್ಕೆ ಮೇಲಿರುವ ಹೊರ ಹೋಗುವ ಬಾಗಿಲನ್ನು ತೆರೆದು 15 ಅಡಿ ಎತ್ತರದಿಂದ ಕೆಳಗೆ ಜಿಗಿದಿದ್ದಾಳೆ ಎಂದು ವೈಮಾನಿಕ ಸಂಸ್ಥೆಯ ಪತ್ರಿಕಾ ಹೇಳಿಕೆ ತಿಳಿಸಿದೆ. ಮಹಿಳೆ ವಿಮಾನ ನಿಲ್ದಾಣದ ಆಪರೇಟಿಂಗ್ ಏರಿಯಾಗೆ ಹಾರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನದಲ್ಲಿದ್ದ ಪ್ರಯಾಣಿಕರ ಪ್ರಕಾರ ಮಹಿಳೆ ಓವರ್‌ವಿಂಗ್ ಎಕ್ಸಿಟ್ ಡೋರ್ ತೆಗೆದು ಹಾರಿದ್ದಾಳೆ. ಹೀಗೆ ಡೋರ್ ತೆಗೆಯುವ ಮೊದಲೂ ಆಕೆ ಯಾರ ಬಳಿಯೂ ಏನೂ ಹೇಳಿರಲಿಲ್ಲ. ಆಕೆ 15 ಅಡಿ ಎತ್ತರದಿಂದ ನೆಲಕ್ಕೆ ಹಾರಿದರೂ ಯಾರಿಗೂ ಗಾಯವಾಗಿಲ್ಲ. ಮಹಿಳೆಯನ್ನು ಬಂಧಿಸಿ ಪ್ರಶ್ನಿಸಲಾಗಿದೆ.

ಕೃಪೆ: khaleejtimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News